Thursday, June 25, 2026
Google search engine
Homeಕಾರ್ಕಳರೋಟರಿ ಆನ್ಸ್ ಕ್ಲಬ್ ಕಾರ್ಕಳ ವತಿಯಿಂದ ಆನ್ಸ್ ಡೇ ಸಂಭ್ರಮಾಚರಣೆ

ರೋಟರಿ ಆನ್ಸ್ ಕ್ಲಬ್ ಕಾರ್ಕಳ ವತಿಯಿಂದ ಆನ್ಸ್ ಡೇ ಸಂಭ್ರಮಾಚರಣೆ

ರೋಟರಿ ಆನ್ಸ್ ಕ್ಲಬ್ ಕಾರ್ಕಳ ವತಿಯಿಂದ “Ann’s Day Celebration” ಕಾರ್ಯಕ್ರಮವು ಬುಧವಾರ ಹೋಟೆಲ್ ಪ್ರಕಾಶ್‌ನ ಸಂಭ್ರಮ ಹಾಲ್ ನಲ್ಲಿ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷರಾದ ರೋ.ನವೀನ್ ಚಂದ್ರ ಶೆಟ್ಟಿ ವಹಿಸಿದ್ದರು. ಆನ್ಸ್ ಕ್ಲಬ್ ಅಧ್ಯಕ್ಷೆ ಜಯಂತಿ ನಾಯಕ್ ಅವರು ಅತಿಥಿಗಳನ್ನು ಹಾಗೂ ಸದಸ್ಯರನ್ನು ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸೀಮಾ ಕಾಮತ್ ಅವರು ಭಾಗವಹಿಸಿ ಶುಭಾಶಯಗಳನ್ನು ವ್ಯಕ್ತಪಡಿಸಿದರು.

ಕ್ಲಬ್‌ನ ಸಭಾಪತಿಗಳಾದ ರೋ.ವೃಂದಾ ಹರಿಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.
ಪ್ರಾರ್ಥನೆಯನ್ನು ಸೃಷ್ಟಿ ನಾಯಕ್ ನೆರವೇರಿಸಿದರು. ಮುಖ್ಯ ಅತಿಥಿಗಳ ಪರಿಚಯವನ್ನು ರೋ. ಗೀತಾ ಕಾಮತ್ ಮಾಡಿಕೊಟ್ಟರು. ಕಾರ್ಯಕ್ರಮ ನಿರೂಪಣೆಯನ್ನು ರೋ. ರೇಖಾ ಉಪಾಧ್ಯಾಯ ನಿರ್ವಹಿಸಿದರು. ಕ್ಲಬ್ ಕಾರ್ಯದರ್ಶಿ ಆಶಾ ಡಿಮೆಲ್ಲೋ ವಂದನಾರ್ಪಣೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಸೀಮಾ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಜ್ಯೋತಿ ಪ್ರಭು ಹಾಗೂ ಸಹನಾ ಶ್ರೀಶ ಭಟ್ ಅವರನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.

ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಸದಸ್ಯರು ಹಾಗೂ ಕುಟುಂಬ ಸದಸ್ಯರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಹರ್ಷೋದ್ಗಾರ, ಮನರಂಜನೆ ಮತ್ತು ಪರಸ್ಪರ ಸ್ನೇಹ ಬಾಂಧವ್ಯವನ್ನು ವೃದ್ಧಿಸುವ ಮೂಲಕ ಆನ್ಸ್ ಡೇ ಆಚರಣೆಯು ಅರ್ಥಪೂರ್ಣವಾಗಿ ನೆರವೇರಿತು.

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments