Monday, June 29, 2026
Google search engine
Homeಕಾರ್ಕಳರಾಮಮಂದಿರ ಕಾಣಿಕೆ ಹಣ ಲೂಟಿ ಪ್ರಕರಣ: ಆಕಾಶವೇನೂ ಕಳಚಿ ಬೀಳಲ್ಲ ಎನ್ನುತ್ತಲೇ ತುರ್ತು ವಿಚಾರಣೆಗೆ ಸುಪ್ರೀಂ...

ರಾಮಮಂದಿರ ಕಾಣಿಕೆ ಹಣ ಲೂಟಿ ಪ್ರಕರಣ: ಆಕಾಶವೇನೂ ಕಳಚಿ ಬೀಳಲ್ಲ ಎನ್ನುತ್ತಲೇ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

ಅಯೋಧ್ಯೆಯ ಭವ್ಯ ರಾಮಮಂದಿರ ನಿರ್ಮಾಣದ ದೇಣಿಗೆಯಲ್ಲಿ ಭಾರಿ ಅಕ್ರಮ ಮತ್ತು ಹಣ ದುರುಪಯೋಗ ನಡೆದಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು (ಜೂನ್​ 29) ನಿರಾಕರಿಸಿದೆ.

‘ಆಕಾಶವೇನೂ ಉರುಳಿ ಬೀಳುವುದಿಲ್ಲ… ಇದರಲ್ಲಿ ಅಂತಹ ತುರ್ತು ಏನಿದೆ’ ಎಂದು ನ್ಯಾಯಮೂರ್ತಿಗಳಾದ ಎಂ. ಎಂ. ಸುಂದರೇಶ್ ಮತ್ತು ಶೀಲ್ ನಾಗು ಅವರಿದ್ದ ಪೀಠವು ಪ್ರಶ್ನಿಸಿದೆ.
‘ಈ ಅರ್ಜಿಯನ್ನು ಬೇಸಿಗೆ ರಜೆಯ ನಂತರ ವಿಚಾರಣೆಗೆ ನಿಗದಿಪಡಿಸಲಾಗುವುದು’ ಎಂದು ಪೀಠವು ತಿಳಿಸಿದೆ.

ಅಜಯ್ ಕುಮಾ‌ರ್ ರಾಯ್ ಮತ್ತು ದಿನೇಶ್ ಕುಮಾರ್ ಯಾದವ್ ಅವರು ಸಲ್ಲಿಸಿದ ಅರ್ಜಿಯಲ್ಲಿ, ‘ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ನ ವ್ಯವಹಾರಗಳು ಮತ್ತು ಆಡಳಿತಕ್ಕೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಹಣಕಾಸಿನ ಅಕ್ರಮ ಹಾಗೂ ಇತರ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಲಾಗಿತ್ತು.

‘ಅಕ್ರಮಗಳ ಕುರಿತ ವರದಿಗಳು, ಅಯೋಧ್ಯೆಯ ವೈಭವದ ಮರುಸ್ಥಾಪನೆಗೆ ಶ್ರಮಿಸಿದ ಜನರಲ್ಲಿ ತೀವ್ರ ಕಳವಳವನ್ನು ಉಂಟುಮಾಡಿವೆ. ಇದು ನಂಬಿಕೆಗೆ ಸಂಬಂಧಿಸಿದ ವಿಚಾರವಾಗಿದ್ದು, ತನಿಖಾ ತಂಡವು ಸಾರ್ವಜನಿಕರಲ್ಲಿ ಭರವಸೆಯನ್ನು ಮೂಡಿಸುವಂತಿರಬೇಕು’ ಎಂದು ಮನವಿ ಮಾಡಿದ್ದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments