Monday, June 29, 2026
Google search engine
Homeಕಾರ್ಕಳಕಾರ್ಕಳ: ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಪಿ. ರವಿ ಆಚಾರ್ಯ ಆಯ್ಕೆ

ಕಾರ್ಕಳ: ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಪಿ. ರವಿ ಆಚಾರ್ಯ ಆಯ್ಕೆ

ಜೊತೆ ಮೊಕ್ತೇಸರರಾಗಿ ನಿಟ್ಟೆ ಸುರೇಶ್‌ ಆಚಾರ್ಯ ಮತ್ತು ಪಿ. ವಸಂತ್‌ ಆಚಾರ್ಯ

ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಪಿ ರವಿ ಆಚಾರ್ಯ ಪೆರ್ವಾಜೆ, ಜೊತೆ ಮೊಕ್ತೇಸರರಾಗಿ ನಿಟ್ಟೆ ಸುರೇಶ್‌ ಆಚಾರ್ಯ ಮತ್ತು ಪಿ. ವಸಂತ್‌ ಆಚಾರ್ಯ ಆಯ್ಕೆಯಾದರು. ಜೂ.28ರಂದು ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ 10 ಗಂಟೆಗೆ ನಡೆದ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆಯು ಜರುಗಿತು. ಪದಗ್ರಹಣ ಸಮಾರಂಭವು ಜುಲೈ 9ರಂದು ದೇವಸ್ಥಾನದಲ್ಲಿ ನಡೆಯಲಿರುವುದು.

ಕುದುರೆಮುಖ ವನ್ಯಜೀವಿ ಅಭಯಾರಣ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್‌. ಸತೀಶ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕ್ಷೇತ್ರದ ಪ್ರಧಾನ ಅರ್ಚಕರಾದ ಪುರೋಹಿತ್‌ ವಿಠಲ್‌ ಆಚಾರ್ಯ ಪ್ರಾರ್ಥಿಸಿ, ನಿಕಟ ಪೂರ್ವ ಆಡಳಿತ ಮೊಕ್ತೇಸರರು ಶಿಲ್ಪಿ ರಾಮಚಂದ್ರ ಆಚಾರ್ಯ ಸ್ವಾಗತಿಸಿದರು. ಭಜನಾ ಸೇವಾ ಸಮಿತಿ ಅಧ್ಯಕ್ಷರಾದ ದಿನೇಶ್‌ ಆಚಾರ್ಯ ಅತ್ತೂರು ವಂದಿಸಿ, ಕಾರ್ಕಳ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷರು ಎಂ. ರಮೇಶ್‌ ಆಚಾರ್ಯ ನಿರೂಪಿಸಿದರು. ಸಭಾಧ್ಯಕ್ಷತೆಯನ್ನು ಶಿಲ್ಪಿ ರಾಮಚಂದ್ರ ಆಚಾರ್ಯ ವಹಿಸಿದ್ದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments