ಶಿವಪುರ ಗ್ರಾಮದ ಸುಶೀಲಾ(74) ಅವರು ಅವರ ಇಬ್ಬರು ಮಕ್ಕಳು ಹಾಗೂ ಸೊಸೆಯೊಂದಿಗೆ ಅರ್ಜಿ ವಿಚಾರಣೆಗಾಗಿ ಹೆಬ್ರಿ ಪೊಲೀಸ್ ಠಾಣೆಗೆ ಬಂದಿದ್ದ ವೇಳೆ ಬೆಳಿಗ್ಗೆ 11:55 ಗಂಟೆಗೆ ಅಸ್ವಸ್ಥಗೊಂಡಿದ್ದು ಅವರ ಮಕ್ಕಳು ಚಿಕಿತ್ಸೆ ಬಗ್ಗೆ ಹೆಬ್ರಿ ಹೆಲ್ತ್ ಕೇರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಸುಶೀಲಾರವರನ್ನು ಪರೀಕ್ಷಿಸಿ ಅವರ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಅವರ ಮರಣಕ್ಕೆ ಲಕ್ಷೀ ಹಾಗೂ ಪ್ರತಿಮಾರವರ ಕಿರುಕುಳ ಕಾರಣ ಆಗಿರುವ ಬಗ್ಗೆ ಸಂಶಯವಿರುವುದಾಗಿ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಅವರ ಮಗ ರಮೇಶ್ ನಾಯ್ಕ್ ದೂರು ನೀಡಿದ್ದಾರೆ.
















