ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆಯವರು ನಡೆಸಿದ ಸಿ ಎ ಫೌಂಡೇಶನ್ ಫಲಿತಾಂಶವು ಪ್ರಕಟಗೊಂಡಿದ್ದು, ಕಾರ್ಕಳ ಕ್ರಿಯೇಟಿವ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಗೈದಿದ್ದಾರೆ.
ವಿದ್ಯಾರ್ಥಿಗಳಾದ ವರುಣ್ ಸಿ ಕಚತ್ತಿ 306
, ದರ್ಶನ್ ಎಂ ಯರಗಲ್ 298
, ಅನಿರುದ್ಧ ಕೆ.ಕೆ.280
, ಅಂಕಗಳನ್ನು ಪಡೆಯುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಉಳಿದಂತೆ ವಿದ್ಯಾರ್ಥಿಗಳಾದ ಭುವನ್ ಆರ್ ಸಿದ್ದರಾಮ್ 267
,ಆದ್ಯ ಎಸ್ ಪಡ್ರೆ 260
, ಕೆ ಪಿ ಸಾಯಿ ಕೃಷ್ಣ249
, ಅಕ್ಷರ ಎಸ್ ನಾಯಕ್248
, ಪವನ್ ಕುಮಾರ್ ಎಲ್.ಎನ್.238
, ಭುವನ್ ಎಸ್.227
, ಚಿರಾಯು ಎಸ್. ಶೆಟ್ಟಿ 216
, ಕಿಶನ್ ಎನ್ 213
ಪೂನಮ್ ಜಿ 209
, ಪ್ರೇರಣ ಆರ್. ಹೆಗಡೆ 208
, ಹಿತ ರವಿ ಶೆಟ್ಟಿ 206
.ಅಂಕಗಳನ್ನು ಗಳಿಸುವುದರ ಮೂಲಕ ಅರ್ಹತೆಯನ್ನು ಗಳಿಸಿಕೊಂಡಿರುತ್ತಾರೆ.
ಪರೀಕ್ಷೆ ಬರೆದಿರುವ 26 ವಿದ್ಯಾರ್ಥಿಗಳಲ್ಲಿ 14ವಿದ್ಯಾರ್ಥಿಗಳು ಮೊದಲ ಪ್ರಯತ್ನದಲ್ಲೇ ಅರ್ಹತೆಯನ್ನು ಗಳಿಸಿರುತ್ತಾರೆ. ರಾಷ್ಟ್ರ ಮಟ್ಟದಲ್ಲಿ ಒಟ್ಟು ಫಲಿತಾಂಶದಲ್ಲಿ 14% ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಅದರಲ್ಲಿ ಕ್ರಿಯೇಟಿವ್ ವಿದ್ಯಾ ಸಂಸ್ಥೆಯಲ್ಲಿ ಪರೀಕ್ಷೆ ತೆಗೆದುಕೊಂಡ ಒಟ್ಟು ವಿದ್ಯಾರ್ಥಿಗಳಲ್ಲಿ 53.84% ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುವುದು ಗಮನಾರ್ಹವಾಗಿದೆ.
ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಬೋಧಕೇತರ ವೃಂದದವರು, ಪರೀಕ್ಷಾ ಸಂಯೋಜಕರಾದ ರಾಘವೇಂದ್ರ ಬಿ ರಾವ್ ರವರು ಅಭಿನಂದಿಸಿದ್ದಾರೆ.



















