ಕಾರ್ಕಳ: ರಾಜ್ಯದಲ್ಲಿ ಕಳೆದ 03 ವರ್ಷಗಳಿಂದ ಕಾಂಗ್ರೆಸ್ಸ್ ಆಡಳಿತದಲ್ಲಿ ವಿಶೇಷವಾಗಿ ಗುಂಡಿ ಮುಚ್ಚಲು ಒಂದೇ ಒಂದು ರೂಪಾಯಿ ಅನುದಾನವನ್ನು ಕೊಡದೆ ಇದ್ದರೂ ಕಾರ್ಕಳದ ಕಾಂಗ್ರೆಸ್ಸ್ ಆರೋಪವನ್ನು ಶಾಸಕರ ಮೇಲೆ ಹೊರಿಸುವಂತದ್ದು ಹಾಸ್ಯಸ್ಪದ. ಕಾರ್ಕಳ ಕಾಂಗ್ರೆಸ್ಸ್ ಇಂದು ಮೆರವಣಿಗೆ ಮುಖಾಂತರ ರಾಜ್ಯ ಸರ್ಕಾರದ ವೈಫಲ್ಯವನ್ನು ಪರೋಕ್ಷವಾಗಿ ಕಾರ್ಕಳದ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಇತ್ತೀಚಿಗೆ ರಾಜ್ಯದ ಲೋಕೋಪಯೋಗಿ ಸಚಿವರು ಕಾರ್ಕಳಕ್ಕೆ ಬಂದಾಗ ಯಾವುದೇ ಅನುದಾನ ಘೋಷಣೆ ಮಾಡಿಸದೆ ಇವತ್ತು ಶಾಸಕರ ಮೇಲೆ ಆರೋಪ ಮಾಡುತ್ತಿರುವುದು ನಾಚಿಕೆಯ ಸಂಗತಿ. ಕಳೆದ ಮೂರು ವರ್ಷಗಳಿಂದ ಉದಯಶೆಟ್ಟಿಯವರ ನೇತೃತ್ವದಲ್ಲಿ ದಿನನಿತ್ಯ ಕೊಡುತ್ತಿರುವ ಅಪ್ರಬುದ್ದ ಮಾಧ್ಯಮ ಹೇಳಿಕೆಗಳು, ಅಭಿವೃದ್ಧಿಯನ್ನು ಅಪಹಾಸ್ಯ ಮಾಡುವುದು,ಯೋಜನೆಗಳಿಗೆ ಅಡ್ಡಗಾಲು ಹಾಕುವುದು, ಸಮಾಜಿಕ ಜಾಲತಾಣಗಳಲ್ಲಿ ಶಾಸಕರ ಮತ್ತು ಬಿಜೆಪಿ ಕಾರ್ಯಕರ್ತರ ತೇಜೋವಧೆ ಮಾಡುವುದು ಅಧಿಕಾರ ದುರುಪಯೋಗಪಡಿಸಿ ಸುಳ್ಳು ಕೇಸುಗಳನ್ನು ದಾಖಲಿಸಿಸುವುದು ಎಲ್ಲವನ್ನು ಕಾರ್ಕಳದ ಪ್ರಬುದ್ದ ಜನತೆ ಸೂಕ್ಷಮವಾಗಿ ಗಮನಿಸುತ್ತಿದ್ದಾರೆ. ಇವರ ಇಂತಹ ವರ್ತನೆಗಳಿಂದ ಕಾರ್ಕಳದ ಕಾಂಗ್ರೆಸ್ಸ್ ಘನತೆಯನ್ನು ಕಳೆದುಕೊಳ್ಳುತ್ತಿದೆ.
ಆದುದರಿಂದ ಮಾನ್ಯ ಉದಯ ಶೆಟ್ಟಿಯವರು ಇಂತಹ ದಿನನಿತ್ಯದ ನಾಟಕಗಳನ್ನು ಬದಿಗಿಟ್ಟು ತಮ್ಮದೆ ಸರ್ಕಾರದಿಂದ ಅನುದಾನ ತಂದು ಕಾರ್ಕಳದ ಅಭಿವೃದ್ದಿಗೆ ಶ್ರಮಿಸಲಿ. ಇದರೊಂದಿಗೆ ಕಾರ್ಕಳದ ಸೌಹಾರ್ದ ವಾತವರಣಕ್ಕಾಗಿ ಕೆಲಸ ಮಾಡುವ ಯೋಚನೆ ಮಾಡಲಿ ಎಂಬುವುದು ನಮ್ಮ ಕಿವಿ ಮಾತು.


















