Friday, September 4, 2026
Google search engine
Homeಕಾರ್ಕಳಕ್ರೈಸ್ಟ್ ಕಿಂಗ್: ಧ್ಯಾನ ಮತ್ತು ಏಕಾಗ್ರತೆ ತರಬೇತಿ ಕಾರ್ಯಕ್ರಮ

ಕ್ರೈಸ್ಟ್ ಕಿಂಗ್: ಧ್ಯಾನ ಮತ್ತು ಏಕಾಗ್ರತೆ ತರಬೇತಿ ಕಾರ್ಯಕ್ರಮ

ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಧ್ಯಾನ ಮತ್ತು ಏಕಾಗ್ರತೆ ಎಂಬ ವಿಷಯದಲ್ಲಿ ತರಬೇತಿ ಮತ್ತು ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರಿನ ಅರೋಹ ಸ್ಪೇಸ್ ಅಕಾಡೆಮಿಯ ಯೋಗ ತರಬೇತುದಾರರಾದ ಶ್ರೀಮತಿ ಪ್ರಿಯಾ ಕೆ.ವಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಕಾರ್ಯಕ್ರಮ ನಡೆಸಿಕೊಟ್ಟರು. ತರಬೇತಿ ನೀಡಿ ಮಾತನಾಡಿದ ಅವರು “ಮನಸ್ಸು ಗೊಂದಲದಲ್ಲಿದ್ದಾಗ ನಾವು ಉತ್ತರ ಹುಡುಕಬಾರದು, ಗೊಂದಲಕಾರಿಯಾದ ಮನಸ್ಸನ್ನು ಶಾಂತಗೊಳಿಸಿದಾಗ ಉತ್ತರ ತಾನಾಗಿಯೇ ಗೋಚರಿಸುತ್ತದೆ” ಎಂದು ಹೇಳಿದರು. ನಂತರ ವಿದ್ಯಾರ್ಥಿಗಳಿಗೆ ಧ್ಯಾನ ತರಬೇತಿ ನಡೆಯಿತು. ಸಂಸ್ಥೆಯ ಉಪಪ್ರಾಚಾರ್ಯ ಡಾ.ಪ್ರಕಾಶ್ ಭಟ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದ್ವಿತೀಯ ವಾಣಿಜ್ಯ ವಿಭಾಗದ ವಿಯೋಲಾ ಸ್ಟ್ಯಾನ್ಲಿ ಟೆಲ್ಲಿಸ್ ಕಾರ್ಯಕ್ರಮ ನಿರೂಪಿಸಿ, ದೀಕ್ಷಾ ವಂದಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments