ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ️(ರಿ.) ಪತ್ತೊಂಜಿಕಟ್ಟೆ, ಪೆರ್ವಾಜೆ
ಇದರ ನೂತನ ಅಧ್ಯಕ್ಷರಾಗಿ ಅಶೋಕ್ ಸುವರ್ಣ
ಕಾರ್ಯದರ್ಶಿಯಾಗಿ ಪ್ರಸನ್ನ ರಾವ್ ಆಯ್ಕೆ
ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ️(ರಿ.), ಪತ್ತೊಂಜಿಕಟ್ಟೆ, ಪೆರ್ವಾಜೆ ಇದರ ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ೨೦೨೬-೨೭ನೇ ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ಅಶೋಕ್ ಸುವರ್ಣ ಇವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಸಂಘದ ಮಹಾಸಭೆಯಲ್ಲಿ ಹಿರಿಯ ಸದಸ್ಯರಾದ ಕೆ. ಪ್ರಭಾಕರ ಬಂಗೇರ ಇವರ ಅಧ್ಯಕ್ಷತೆಯಲ್ಲಿ 2026-2027 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಉಪಾಧ್ಯಕ್ಷರಾಗಿ ದಿನೇಶ್ ಕೊರಳಕೋಡಿ, ಕಾರ್ಯದರ್ಶಿಯಾಗಿ ಪ್ರಸನ್ನ ರಾವ್, ಜತೆಕಾರ್ಯದರ್ಶಿಯಾಗಿ ರವೀಂದ್ರ ಸಫಲಿಗ, ಕೋಶಾಧಿಕಾರಿಯಾಗಿ ನವೀನ್ ಎಂ. ಸುವರ್ಣ, ಕ್ರೀಡಾ ಕಾರ್ಯದರ್ಶಿ ಸುರೇಶ್ ಸುವರ್ಣ, ಸಾಂಸ್ಕöÈತಿಕ ಕಾರ್ಯದರ್ಶಿಯಾಗಿ ಅಕ್ಷಯ್ ಪಿ. ಬಂಗೇರ, ಲೆಕ್ಕಪರಿಶೋಧಕರಾಗಿ ರಘುನಾಥ್ ಪೂಜಾರಿ ಇವರು ಆಯ್ಕೆಯಾದರು.
ಗೌರವ ಸಲ️ಹೆಗಾರರಾಗಿ ಕೆ.ಪ್ರಭಾಕರ ಬಂಗೇರ, ಗಣೇಶ್ ಎಂ. ಶೆಟ್ಟಿ, ಸದಾಶಿವ ಶೆಟ್ಟಿ, ಅಬ್ದುಲ್ ರಹೀಂ ಪೊಲ್ಲಾರ್, ಇವರನ್ನು ಆರಿಸಲಾಯಿತು. 15 ಮಂದಿ ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.


















