Friday, October 9, 2026
Google search engine
Homeಕಾರ್ಕಳಕಾರ್ಕಳ ಬಸ್ ಸ್ಟ್ಯಾಂಡ್ ಗಣೇಶೋತ್ಸವ ಸಮಿತಿ ಸಭೆ

ಕಾರ್ಕಳ ಬಸ್ ಸ್ಟ್ಯಾಂಡ್ ಗಣೇಶೋತ್ಸವ ಸಮಿತಿ ಸಭೆ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಸ್ ಸ್ಟ್ಯಾಂಡ್ (ರಿ) ಕಾರ್ಕಳ ಇದರ ಆಶ್ರಯದಲ್ಲಿ ಆಚರಿಸಲ್ಪಡುವ 19ನೇ ವರ್ಷದ ಗಣೇಶೋತ್ಸವದ ಪೂರ್ವಭಾವಿ ಸಭೆಯು ಇಂದು ರಾಧಾಕೃಷ್ಣ ಸಭಾಭವನದಲ್ಲಿ ಸಮಿತಿಯ ಸ್ಥಾಪಕಾದ್ಯಕ್ಷರಾದ ಶುಭದರಾವ್ ಅಧ್ಯಕ್ಷತೆಯಲ್ಲಿ ನಡೆಯಿತು.

19ನೇ ವರ್ಷದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಸುರೇಶ್ ದೇವಾಡಿಗ ಮರು ಆಯ್ಕೆಯಾದರು ಮತ್ತು ವಿವಿಧ ಪಧಾಧಿಕಾರಿಗಳನ್ನು ನೇಮಕ‌ ಮಾಡಿ ಅವರಿಗೆ ವಿವಿದ ಜವಾಬ್ದಾರಿಗಳ್ನು ಹಂಚಲಾಯಿತು.

ಗೌರವ ಸಲಹೆಗಾರ ಆದಿರಾಜ ಅಜ್ರಿ ಸಂದರ್ಭೋಚಿತ ‌ಮಾತುಗಳನ್ನಾಡಿ ಉತ್ಸವದ ಭಕ್ತಿ ಪೂರ್ಣ ಆಚರಣೆಗೆ ಮಾರ್ಗದರ್ಶನ ಮಾಡಿದರು.

ಸಮಿತಿಯ ಕಾರ್ಯದರ್ಶಿ ಇಕ್ಬಾಲ್ ಅಹಮ್ಮದ್ ಸ್ವಾಗತಿಸಿ ಉಪಾದ್ಯಕ್ಷ ರಾಜರಾಮ್ ಕಾಮತ್ ಧನ್ಯವಾದವಿತ್ತರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments