Friday, October 9, 2026
Google search engine
Homeಕಾರ್ಕಳಜ್ಞಾನಸುಧಾ : ಎನ್.ಎಸ್.ಎಸ್ ಹಾಗೂ ವಾಣಿಜ್ಯ ವಿಭಾಗದಿಂದ ವಿಶೇಷ ಕಾರ್ಯಾಗಾರ

ಜ್ಞಾನಸುಧಾ : ಎನ್.ಎಸ್.ಎಸ್ ಹಾಗೂ ವಾಣಿಜ್ಯ ವಿಭಾಗದಿಂದ ವಿಶೇಷ ಕಾರ್ಯಾಗಾರ

ಮೊಬೈಲ್ ಗೀಳಿನಿಂದ ಹೊರಬನ್ನಿ : ಸುಚಿತ್ ಕೋಟ್ಯಾನ್ ಕರೆ

ಇಂದು ಜನರಲ್ಲಿ ಮೊಬೈಲ್ ವೀಕ್ಷಣೆಯ ಮಟ್ಟ ಹೆಚ್ಚಾಗಿ, ಅನಾರೋಗ್ಯಕರ ಮನಸ್ಥಿತಿ ಉಂಟಾಗಿದೆ. ಇದರಿಂದ ಹೊರಬರಲು ಹವ್ಯಾಸಗಳು, ವ್ಯಾಯಾಮ, ಸಂಘ ಜೀವನದ ಜೊತೆಗೆ ಸಕಾರಾತ್ಮಕ ಜೀವನ ಶೈಲಿ ನಮ್ಮಲ್ಲಿದ್ದರೆ ಆರೋಗ್ಯಕರ ಬದುಕು ಸಾಧ್ಯ ಎಂದು ಎಂ.ಜಿ. ಎಂ ಕಾಲೇಜಿನ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥ ಶ್ರೀ ಸುಚಿತ್ ಕೋಟ್ಯಾನ್ ಹೇಳಿದರು.

ಅವರು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಆಯೋಜಿಸಿದ ‘ಡೂಮ್ ಸ್ಕ್ರೋಲಿಂಗ್ ಟು ಡೀಪ್ ಫೋಕಸ್’ ಎಂಬ ವಿಷಯದ ಕುರಿತು ನಡೆದ ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಉಪಪ್ರಾಂಶುಪಾಲರಾದ ಶ್ರೀ ಸಾಹಿತ್ಯ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸುಮಿತ್ರಾ, ಎನ್.ಸಿ.ಸಿ ಅಧಿಕಾರಿ ಲೆ. ಮಂಜುನಾಥ್ ಮುದೂರು, ಎನ್.ಎಸ್ ಎಸ್ ಉಪಸಂಯೋಜನಾಧಿಕಾರಿ ಶ್ರೀ ಪ್ರಸಾದ್ ಆಚಾರ್ಯ, ದೈ.ಶಿ.ನಿರ್ದೇಶಕಿ ಶ್ರೀಮತಿ ಸೌಜನ್ಯ ಹೆಗ್ಡೆ ಹಾಗೂ ಎನ್ ಎಸ್.ಎಸ್ ನಾಯಕಿ ಅನ್ವಿತಾ ಶೆಟ್ಟಿ ಉಪಸ್ಥಿತರಿದ್ದರು.

ಎನ್.ಎಸ್.ಎಸ್ ನಾಯಕ ಧನುಷ್ ಚೌಟ ಕಾರ್ಯಕ್ರಮ ನಿರೂಪಿಸಿ, ಶ್ರೀಕರ್ ಭಟ್ ಸ್ವಾಗತಿಸಿ, ಅಧ್ವೆöÊತ್ ಸಾಲ್ಯಾನ್ ಅತಿಥಿಯನ್ನು ಪರಿಚಯಿಸಿ ಹಾಗೂ ಆಶ್ಲೇಷ್ ಪ್ರಭು ವಂದಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments