Tuesday, August 25, 2026
Google search engine
Homeಕಾರ್ಕಳನಂದಳಿಕೆ ಬೋರ್ಡ್ ಶಾಲೆಯಲ್ಲಿ ಗ್ರೀನ್ ಡೇ ಕಾರ್ಯಕ್ರಮ.

ನಂದಳಿಕೆ ಬೋರ್ಡ್ ಶಾಲೆಯಲ್ಲಿ ಗ್ರೀನ್ ಡೇ ಕಾರ್ಯಕ್ರಮ.

ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಶತಮಾನ ಕಂಡ ನಂದಳಿಕೆ ಬೋರ್ಡ್ ಶಾಲೆಯಲ್ಲಿ ಪ್ರಪ್ರಥಮ ಬಾರಿಗೆ ಹಸಿರು ದಿನ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮದಲ್ಲಿ LKG ಮತ್ತು UKG ಸಮಿತಿಯ ಅಧ್ಯಕ್ಷರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಆಗಿರುವ ಸುಭಾಷ್ ಕುಮಾರ್ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಈ ಶಾಲೆಯಲ್ಲಿ ಪ್ರಸ್ತುತ ವರ್ಷದಲ್ಲಿ ಇಂಗ್ಲಿಷ್ ಶಿಕ್ಷಣ ಪ್ರಾರಂಭಿಸಿದ್ದು LKG ಮತ್ತು UKG ತರಗತಿಗೆ ಈಗಾಗಲೇ 52 ವಿದ್ಯಾರ್ಥಿಗಳು ದಾಖಲಾತಿ ಮಾಡಿ ಪರಿಸರದ ಖಾಸಗಿ ಶಿಕ್ಷಣ ಕೇಂದ್ರಗಳಿಗಿಂತಲೂ ಅತಿ ಹೆಚ್ಚು ನೋಂದಾವಣೆ ಆಗಿದ್ದು ಸಂತಸ ತಂದಿದೆ. ಪ್ರಥಮ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿದ ಶಿಕ್ಷಕ ವೃಂದಕ್ಕೆ ಅಭಿನಂದನೆ ಸಲ್ಲಿಸಿದರು.

ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಹಸಿರು ಬಣ್ಣದ ಬಟ್ಟೆಯನ್ನು ತೊಡಿಸಿಕೊಂಡು, ಹಸಿರು ಬಣ್ಣದ ವಿವಿಧ ವಸ್ತುಗಳನ್ನು ತಂದು ಅಲಂಕರಿಸಿ ಸಂಭ್ರಮಿಸಿದರು.ಮುಖ್ಯ ಶಿಕ್ಷಕಿಯಾದ ಜೇಸಿಂತ ನಾನ್ಸಿ ಅಗೇರ ಅವರು ಸ್ವಾಗತಿಸಿ ಶುಭ ಹಾರೈಸಿದರು. ಶಿಕ್ಷಕರಾದ ಚಂದ್ರಕಾಂತ್ ಡೇಸಾ ರವರು ಪರಿಸರದ ಬಗ್ಗೆ ತಮ್ಮ ಕಾಳಜಿ ಏನು ಎಂಬ ವಿಷಯದ ಬಗ್ಗೆ ಮಾತಾಡಿ ಮಕ್ಕಳಿಗೆ ಅಭಿನಂದನೆ ಸಲ್ಲಿಸಿದರು. SDMC ಅಧ್ಯಕ್ಷರಾದ ಮಮತಾರವರು ಉಪಸ್ಥಿತರಿದ್ದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments