ಕಾರ್ಕಳ : ಲಕ್ಷ್ಮಣ್ ಎಂಬವರಿಗೆ ಫೇಸ್ ಬುಕ್‌ನಲ್ಲಿ ವೀಡಿಯೋ ಬಂದಿದ್ದು, ಅದರಲ್ಲಿ JB ( Julius Baer VIP Group) ಮತ್ತು 5paisa ಆಪ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಡಬಲ್ ಲಾಭಾಂಶ ಕೊಡುವುದಾಗಿ ಬಂದಿದ್ದು, ಅದರಲ್ಲಿದ್ದ ಲಿಂಕನ್ನು ಲಕ್ಷ್ಮಣ್ ಅವರು ಕ್ಲಿಕ್ ಮಾಡಿದಾಗ JB (Julius Baer VIP Group) ಮತ್ತು5 paisa ಎಂಬ ವಾಟ್ಸ್‌ಪ್ ಗ್ರೂಪ್‌ಗೆ ಜಾಯಿನ್ ಆಗಿದ್ದು, ವ್ಯಾಟ್ಸ್‌ಪ್ ಗ್ರೂಪ್‌ನಲ್ಲಿ ಅಪರಿಚಿತರು ಹೆಚ್ಚಿನ ಲಾಭಾಂಶ ಮಾಡುವ ಷೇರು ಮತ್ತು PO ಗಳಲ್ಲಿ ಹೂಡಿಕೆ ಮಾಡಬೇಕಾಗಿ ತಿಳಿಸಿದ್ದಾರೆ.
ದೂರುದಾರ ಲಕ್ಷ್ಮಣ್ ಅವರು 17-07-2026 ರಿಂದ 04-08-2026 ರವರೆಗೆ ಹಂತ ಹಂತವಾಗಿ ಒಟ್ಟು ರೂಪಾಯಿ 32,68,000/- ಹಣವನ್ನು ವರ್ಗಾಯಿಸಿದ್ದಾರೆ. ಆದರೆ ಅಪರಿಚಿತ ವ್ಯಕ್ತಿಯು ಈ ತನಕ ದೂರುದಾರ ಲಕ್ಷ್ಮಣ್ ಅವರಿಗೆ ಹೂಡಿಕೆ ಮಾಡಿದ ಹಣವನ್ನಾಗಲಿ, ಲಾಭಾಂಶವನ್ನು ನೀಡದೇ ನಂಬಿಸಿ, ಮೋಸ ಮಾಡಿರುವುದಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.


























