Monday, August 24, 2026
Google search engine
Homeಕರಾವಳಿಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ಆ.26ರ ಬದಲು ಆ.25ರಂದು ಮೀಲಾದುನ್ನೆಬಿ ರಜೆ ನೀಡುವಂತೆ ಸಚಿವ ಖಾದರ್...

ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ಆ.26ರ ಬದಲು ಆ.25ರಂದು ಮೀಲಾದುನ್ನೆಬಿ ರಜೆ ನೀಡುವಂತೆ ಸಚಿವ ಖಾದರ್ ಸೂಚನೆ

ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ಆ. 25ರ ಮಂಗಳವಾರ ಮೀಲಾದುನ್ನೆಬಿ ಆಚರಿಸಲಾಗು ತ್ತಿದೆ. ಹಾಗಾಗಿ ಸರಕಾರಿ ಸಾರ್ವತ್ರಿಕ ರಜೆಯನ್ನು ಆ.25ರಂದು ನೀಡಲು ರಾಜ್ಯ ಆರೋಗ್ಯ ಮತ್ತು ಮತ್ತು ಕುಟುಂಬ ಕಲ್ಯಾಣ ಹಾಗೂ ಹಜ್ಜ್ ಮತ್ತು ವಕ್ಫ್ ಹಾಗೂ ದ.ಕ. ಉಸ್ತುವಾರಿ ಸಚಿವ ಯು.ಟಿ.ಖಾದರ್ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ಈಗಾಗಲೆ ರಾಜ್ಯ ಸರಕಾರವು ಮೀಲಾದುನ್ನೆಬಿ ಸಾರ್ವತ್ರಿಕ ರಜೆಯನ್ನು ಆ.26ರಂದು ನಿಗದಿಪಡಿಸಿತ್ತು. ಆದರೆ ಇಸ್ಲಾಮಿಕ್ ತಿಂಗಳ ಆರಂಭದ ಚಂದ್ರದರ್ಶನದಲ್ಲಿ ವ್ಯತ್ಯಾಸವಾದ ಕಾರಣ ಪ್ರವಾದಿ ಮುಹಮ್ಮದ್ (ಸ)ರ ಜನ್ಮದಿನವನ್ನು ಆ.25ರಂದು ಆಚರಿಸಲು ಉಭಯ ಜಿಲ್ಲೆಯ ಖಾಝಿಗಳು ನಿರ್ಧರಿಸಿದ್ದಾರೆ.

ಈ ನಿಟ್ಟಿನಲ್ಲಿ ಎರಡೂ ಜಿಲ್ಲೆಗಳ ಹಲವು ಮುಸ್ಲಿಂ ಸಂಘಟನೆಗಳ ಮುಖಂಡರು ಆ.26ರ ಸಾರ್ವತ್ರಿಕ ರಜಾ ದಿನವನ್ನು ಬದಲಾಯಿಸಿ ಆ.25ರಂದು ನೀಡಲು ಸಚಿವ ಖಾದರ್‌ಗೆ ಮನವಿ ಮಾಡಿದ್ದರು. ಅದರಂತೆ ಸಚಿವ ಖಾದರ್ ಆ.25ರಂದು ರಜೆ ಘೋಷಿಸುವಂತೆ ಉಭಯ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments