ಕಾರ್ಕಳ : ವಿಶ್ವಕರ್ಮ ಸಹಕಾರ ಬ್ಯಾಂಕ್ ಸ್ವರ್ಣ ಸಂಭ್ರಮ ದ ಪ್ರಯುಕ್ತ *ಕಾರ್ಕಳ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘ ಕಾರ್ಕಳ ಇವರ ಸಹಯೋಗದೊಂದಿಗೆ ಡಾ! ಟಿ. ಎಂ. ಪೈ ರೋಟರಿ ಆಸ್ಪತ್ರೆ ಕಾರ್ಕಳ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಭಾನುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷ ಪಿ ಜಗದೀಶ್ ಆಚಾರ್ಯ, ನಿರ್ದೇಶಕರಾದ ಕೆ ಹರೀಶ್ ಕುಮಾರ್, ಡಿ ಭಾಸ್ಕರ ಆಚಾರ್ ಉದ್ಯಮಿಗಳಾದ ಕಮಲಾಕ್ಷ ನಾಯಕ್ ಕಾರ್ಕಳ, ಕಾರ್ಕಳ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘ ಕಾರ್ಕಳ ಅಧ್ಯಕ್ಷರಾದ ಎಂ ರಮೇಶ್ ಆಚಾರ್, ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನ ಕಾರ್ಕಳ ದ ಆಡಳಿತ ಮೋಕೆಸ್ತರರು ಪಿ ರವಿ ಆಚಾರ್, ಟಿ ಎಂ ಎ ಪೈ ಆಸ್ಪತ್ರೆಯ ವೈದ್ಯಾಧಿಕಾರಿ ನಿಖಿತಾ, ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ಕಾರ್ಕಳ ಅಧ್ಯಕ್ಷರಾದ ಕವಿತಾ ಹರೀಶ್, ಉಪಸ್ಥಿತರಿದ್ದರು, ಬ್ಯಾಂಕಿನ ಗ್ರಾಹಕರು ಹಾಗೂ ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಂಡರು



















