Sunday, September 6, 2026
Google search engine
Homeಕಾರ್ಕಳಸ್ವಸ್ತಿ ಶ್ರೀ ನೇಮಿಸಾಗರ ವರ್ಣಿಜಿ ಆಂಗ್ಲ ಮಾಧ್ಯಮ ಶಾಲೆ ಹಿರಿಯಂಗಡಿ: ಮುದ್ದು ರಾಧಾಕೃಷ್ಣ ಮತ್ತು ಶಿಕ್ಷಕರ...

ಸ್ವಸ್ತಿ ಶ್ರೀ ನೇಮಿಸಾಗರ ವರ್ಣಿಜಿ ಆಂಗ್ಲ ಮಾಧ್ಯಮ ಶಾಲೆ ಹಿರಿಯಂಗಡಿ: ಮುದ್ದು ರಾಧಾಕೃಷ್ಣ ಮತ್ತು ಶಿಕ್ಷಕರ ದಿನಾಚರಣೆ

ಸ್ವಸ್ತಿ ಶ್ರೀ ನೇಮಿಸಾಗರ ವರ್ಣಿಜಿ ಆಂಗ್ಲ ಮಾಧ್ಯಮ ಶಾಲೆ ಹಿರಿಯಂಗಡಿ ಕಾರ್ಕಳದಲ್ಲಿ ಮುದ್ದು ರಾಧಾಕೃಷ್ಣ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಮುಖ್ಯೋಪಾಧ್ಯಾಯನಿ ಶರ್ಮಿಳ ಹೆಗ್ಡೆ ಮತ್ತು ಶಿಕ್ಷಕ ವೃಂದದವರು ಮತ್ತು ಮುದ್ದು ರಾಧಾಕೃಷ್ಣ ಪುಟಾಣಿಗಳು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಶಿಕ್ಷಕರ ದಿನಾಚರಣೆ ಬಗ್ಗೆ ಮುಖ್ಯ ಶಿಕ್ಷಕಿ  ಶರ್ಮಿಳ ಹೆಗ್ಡೆ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹ ಶಿಕ್ಷಕಿ  ಶ್ರದ್ಧಾ ಕುಮಾರಿ ಇವರು ಶಿಕ್ಷಕರ ದಿನಾಚರಣೆ ಮಹತ್ವ ದ ಬಗ್ಗೆ ಮಾತನಾಡಿ ಮಕ್ಕಳು ಶಿಕ್ಷಕರನ್ನು ಹೇಗೆ ಗೌರವಿಸಬೇಕು. ಮಕ್ಕಳು ಶಿಕ್ಷಕರಿಗೆ ವಿಧೇಯರಾಗಿದ್ದು, ಶಿಕ್ಷಕರು ನೀಡುವ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಲು ಸಾಧ್ಯವಾಗುತ್ತದೆ ಎಂದರು. ಮತ್ತು ಎಲ್ಲ ಸಹೋದ್ಯೋಗಿ ಬಂಧುಗಳಿಗೆ ಶುಭಾಶಯವನ್ನು ತಿಳಿಸಿದರು.

ಸ್ಕೌಟ್ಸ್ ಗೈಡ್ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ತಾವೇ ತಯಾರಿಸಿದ ವಿವಿಧ ಬಗೆಯ ಬಹುಮಾನಗಳನ್ನು ನೀಡಿದರು. ಮಕ್ಕಳು ಶಿಕ್ಷಕರಿಗೆ ವಿವಿಧ ಬಗೆಯ ಸ್ಪರ್ಧೆಗಳನ್ನು ಏರ್ಪಡಿಸಿದರು. ಹಾಗೂ ಗೆದ್ದವರಿಗೆ ಬಹುಮಾನಗಳನ್ನು ನೀಡಿದರು. ಎಲ್ಲ ವಿದ್ಯಾರ್ಥಿಗಳು ಶಿಕ್ಷಕರಿಗೆ ವಿವಿಧ ಬಗೆಯ ಸವಿನೆನಪಿನ ಉಡುಗೊರೆಗಳನ್ನು ನೀಡಿದರು.

ಕಾರ್ಯಕ್ರಮದ ಕೊನೆ ಅಂಗವಾಗಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಎಲ್ಲ ಮಕ್ಕಳು ಹಾಗು ಶಿಕ್ಷಕರು ಈ ಒಂದು ಕಾರ್ಯಕ್ರಮದಲ್ಲಿ ಸಂತೋಷದಿಂದ ಪಾಲ್ಗೊಂಡು ಸಂಭ್ರಮಿಸಿದರು. ಮುದ್ದು ರಾಧಾಕೃಷ್ಣ ಮಕ್ಕಳಿಗೆ ಮುಖ್ಯ ಶಿಕ್ಷಕರು ಬಹುಮಾನಗಳನ್ನು ನೀಡಿ ಶುಭ ಹಾರೈಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸಹ ಶಿಕ್ಷಕಿ ವೀಣಾ ಸಿ ನಾಯಕ್ ರವರು ನೆರವೇರಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments