ಪರಪ್ಪಾಡಿ ಫ್ರೆಂಡ್ಸ್ ಪರಪ್ಪಾಡಿ ಇವರ ಆಶ್ರಯದಲ್ಲಿ ಶ್ರೀ ಕ್ರಷ್ಣ ಜನ್ಮಾಷ್ಟಮಿಯ ಪ್ರಯುಕ್ತ 12 ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಬಳಿ ನಡೆಯಿತು. ವಿವಿಧ ವಯೋಮಾನದವರಿಗೆ ನಾನಾ ರೀತಿಯ ಆಕರ್ಷಕ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ವಿಶೇಷ ಆಕರ್ಷಣೆಯಾಗಿ ಮಕ್ಕಳಿಗೆ ಮುದ್ದು ಕೃಷ್ಣ ಸ್ಪರ್ಧೆ ನಡೆದಿದ್ದು ಸರ್ವರ ಮನಸೊರೆಗೊಂಡಿತು. ಮುಖ್ಯ ಅಭ್ಯಾಗತರಾಗಿ ಜೀವಂಧರ್ ಕುಮಾರ್ ಪರಪ್ಪಾಡಿ ಬೀಡು,ಮಹಾಬಲ ಸುವರ್ಣ ಮೈಲಾಜೆ,ಫಾ|ಅಶ್ವಿನ್ ಆರಾನ್ಹ, ಪುರೋಹಿತ್ ಬಿ. ಹರೀಶ್ ಆಚಾರ್ಯ ಉಪಸ್ಥಿತರಿದ್ದು ಸಂದರ್ಭೋಚಿತ ಮಾತುಗಳನ್ನಾಡಿದರು.
ಇದೆ ಸಂಧರ್ಭದಲ್ಲಿ ವಿಜಯ ಕರ್ನಾಟಕ ದ ಪತ್ರಕರ್ತರು ಆಗಿರುವಂತ ವಿಲಾಸ್ ಕುಮಾರ್ ನಿಟ್ಟೆ ಇವರಿಗೆ ಗಣ್ಯರೊಂದಿಗೆ ಸನ್ಮಾನಿಸಲಾಯಿತು ಹಾಗೂ SSLC ಮತ್ತು PUC ಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿಧ್ಯಾನಿಧಿ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.ಹಾಗೂ ಊರಿನ ಬಡ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಧನಸಹಾಯವನ್ನು ನೀಡಲಾಯಿತು. ನಂತರ ಪುರುಷರಿಗೆ ವಾಲಿಬಾಲ್ ಹಾಗೂ ಮಹಿಳೆಯರಿಗೆ ತ್ರೋಬಾಲ್ ಹಗ್ಗಜಗ್ಗಾಟದೊಂದಿಗೆ ಸಮಾಪ್ತಿಗೊಂಡಿತು.
ಪ್ರಸಕ್ತ ವರ್ಷದ ಪರಪ್ಪಾಡಿ ಫ್ರೆಂಡ್ಸ್ ನ ಅಧ್ಯಕ್ಷತೆಯನ್ನು ಸುಖೇಶ್ ಕುಮಾರ್ ಕಾಡ್ರೆ ಹಾಗೂ ಕಾರ್ಯದರ್ಶಿಯಾಗಿ ಜೋಹಾನ್ ಲೋಬೊ ವಹಿಸಿದ್ದರು.
























