Sunday, September 20, 2026
Google search engine
Homeಕಾರ್ಕಳತುಳು ಭಾಷೆಗೆ ಐತಿಹಾಸಿಕ ಮಾನ್ಯತೆ — ಹೃದಯಪೂರ್ವಕ ಅಭಿನಂದನೆಗಳು — ಮಂಜುನಾಥ ಜೋಗಿ

ತುಳು ಭಾಷೆಗೆ ಐತಿಹಾಸಿಕ ಮಾನ್ಯತೆ — ಹೃದಯಪೂರ್ವಕ ಅಭಿನಂದನೆಗಳು — ಮಂಜುನಾಥ ಜೋಗಿ

 

ತುಳು ಭಾಷೆಯ ಐತಿಹಾಸಿಕತೆ, ಶ್ರೀಮಂತ ಸಂಸ್ಕೃತಿ ಹಾಗೂ ಕರಾವಳಿಯ ಜನರ ಬಹುದಿನಗಳ ಆಶಯವನ್ನು ಗೌರವಿಸಿ, ತುಳುವಿಗೆ ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆ ಸ್ಥಾನಮಾನ ನೀಡುವ ಮಹತ್ವದ ನಿರ್ಧಾರ ಕೈಗೊಂಡಿರುವ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಹಾಗೂ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ತುಳುವಿನ ಉಳಿವು, ಬೆಳವಣಿಗೆ ಮತ್ತು ಮುಂದಿನ ಪೀಳಿಗೆಗೆ ಅದರ ಶ್ರೀಮಂತ ಪರಂಪರೆಯನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಈ ನಿರ್ಧಾರ ಮಹತ್ವದ ಹೆಜ್ಜೆಯಾಗಿದೆ. ತುಳುನಾಡಿನ ಜನರ ಬಹುದಶಕಗಳ ಆಶಯಕ್ಕೆ ಗೌರವ ದೊರೆತಿರುವುದು ಸಂತಸದ ಸಂಗತಿ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜೋಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಳು ನಮ್ಮ ಹೆಮ್ಮೆ… ತುಳು ನಮ್ಮ ಅಸ್ಮಿತೆ…

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments