ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ಹಾಗೂ ರಾಜೇಶ್ವರಿ ಎಜುಕೇಶನ್ ಫೌಂಡೇಷನ್ (ರಿ.) ಸಾಣೂರು ಇವರ ಸಹಯೋಗದಲ್ಲಿ ಕಾರ್ಕಳ ತಾಲೂಕು 22 ನೇ ಕನ್ನಡ ಸಾಹಿತ್ಯ ಸಮ್ಮೇಳನ ನವೆಂಬರ್ 7 ರಂದು ರಾಜೇಶ್ವರಿ ನ್ಯಾಷನಲ್ ಕಾಲೇಜ್ ಸಾಣೂರು ಕಾರ್ಕಳ ಇಲ್ಲಿ ನಡೆಯಲಿದೆ.
ಸಾಹಿತಿ ಖ್ಯಾತ ಯಕ್ಷಗಾನ ಅರ್ಥಧಾರಿ ,ವೇಷಧಾರಿ ಯಕ್ಷಗಾನ ಸಂಘಟಕ ವಾಗ್ಮಿ , ಉಪನ್ಯಾಸಕ ಕೋಟೆ. ಎಸ್. ರಾಮ ಭಟ್ಟ ಕಾರ್ಕಳ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮುನ್ನಡೆಸಲಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
























