ಶ್ರೀ ವೆಂಕಟರಮಣ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಮತ್ತು ರೆಡ್‌ರಿಬ್ಬನ್ ವತಿಯಿಂದ ಅಂತರಾಷ್ಟ್ರೀಯ ಏಡ್ಸ್ ದಿನಾಚರಣೆಯ ಅಂಗವಾಗಿ ಏಡ್ಸ್ ಜಾಗೃತಿಯ ಕಾರ್ಯಕ್ರಮವು ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಿಂದಿಯ ಶೆಟ್ಟಿ ಆಪ್ತಸಮಾಲೋಚಕರು, ಸರಕಾರಿ ಆಸ್ಪತ್ರೆ ಕಾರ್ಕಳ ಇವರು ವಿದ್ಯಾರ್ಥಿನಿಯರಿಗೆ ಏಡ್ಸ್ನ ಜಾಗೃತಿಯ ಕುರಿತು ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರೋ.ಗೀತಾ. ಜಿ ಯವರು ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಭಾಗ್ಯ ಇವರು ಸ್ವಾಗತಿಸಿದರು. ಮುನೀರಾ ಕಾರ್ಯಕ್ರಮ ನಿರೂಪಿಸಿದರು, ನಿಶಾ ವಂದಿಸಿದರು.
























