ಕಾರ್ಕಳ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಅಂಬೇಡ್ಕರ್‌ವಾದ, ಕಾರ್ಕಳ ತಾಲೂಕು ಸಮಿತಿಯ ವತಿಯಿಂದ “ಭೀಮ ಶಕ್ತಿ ಸಮಾವೇಶ ಹಾಗೂ ಪದಗ್ರಹಣ ಸಮಾರಂಭ”ವು ಸೆಪ್ಟೆಂಬರ್ 27ರಂದು (ಭಾನುವಾರ) ಬೆಳಿಗ್ಗೆ 10 ಗಂಟೆಗೆ ಕಾರ್ಕಳದ ಕಾಬೆಟ್ಟು ಪ್ರದೇಶದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಅಂಬೇಡ್ಕರ್‌ವಾದದ ಕಾರ್ಕಳ ತಾಲೂಕು ಸಮಿತಿಯ ಪುನರ್‌ರಚನೆ, ನೂತನ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮಗಳು ನಡೆಯಲಿವೆ.



























