Sunday, September 27, 2026
Google search engine
Homeಕಾರ್ಕಳಈಜುಸ್ಪರ್ಧೆ : ಕಾರ್ಕಳ ಜ್ಞಾನಸುಧಾದ 8 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಈಜುಸ್ಪರ್ಧೆ : ಕಾರ್ಕಳ ಜ್ಞಾನಸುಧಾದ 8 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಗಣಿತನಗರ : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ ಇವರ ಸಹಯೋಗದಲ್ಲಿ, ಎಂ.ಐ.ಟಿ ಮಣಿಪಾಲ ಇಲ್ಲಿ ಜರುಗಿದ ಉಡುಪಿ ಜಿಲ್ಲಾ ಮಟ್ಟದ ಈಜುಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ೮ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ. ವಿದ್ಯಾರ್ಥಿಗಳಾದ, ಭೂಮಿ- 2೦೦ಮೀ “ಬಟರ್‌ಫ್ಲೈನಲ್ಲಿ, 4೦೦ಮೀ ಫ್ರೀಸ್ಟೈಲ್ನಲ್ಲಿ ಹಾಗೂ 2೦೦ಮೀ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕವನ್ನು, ಪೂರ್ವಿಕ್ ಎಸ್ ಬಾಬು-15೦೦ಮೀ, 4೦೦ಮೀ ಫ್ರೀಸ್ಟೈಲ್ನಲ್ಲಿ ವಿಭಾಗದಲ್ಲಿ ಹಾಗೂ ೨೦೦ಮೀ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕವನ್ನು,
ವೈ.ಎಸ್.ರಿಯಾ ಗೌಡ- 2೦೦ಮೀ ಫ್ರೀಸ್ಟೈಲ್ನಲ್ಲಿ ಚಿನ್ನದ ಪದಕವನ್ನು ಹಾಗೂ 4೦೦ಮೀ ಫ್ರೀಸ್ಟೈಲ್ ನಲ್ಲಿ ಬೆಳ್ಳಿ ಪದಕವನ್ನು, ಯುತಿ ಶ್ರೀ ವಿ – 2೦೦ಮೀ ಬ್ರೆಸ್ಟ್‌ಸ್ಟ್ರೋಕ್ನಲ್ಲಿ ಚಿನ್ನದ ಪದಕ, 5೦ಮೀ ಬ್ರೆಸ್ಟ್‌ಸ್ಟ್ರೋಕ್ನಲ್ಲಿ ಬೆಳ್ಳಿ ಪದಕ, 1೦೦ಮೀ ಬ್ರೆಸ್ಟ್‌ಸ್ಟ್ರೋಕ್ ಕಂಚಿನ ಪದಕವನ್ನು, ಶಿಲ್ಪಿತಾ ಎನ್ – 2೦೦ಮೀ ಬ್ರೆಸ್ಟ್‌ಸ್ಟ್ರೋಕ್ ನಲ್ಲಿ ಬೆಳ್ಳಿಪದಕ ಪದಕವನ್ನು, ಓಂಕಾರ್ ಎಂ.ಬಿ – 2೦೦ಮೀ ಫ್ರೀಸ್ಟೈಲ್ ನಲ್ಲಿ ಚಿನ್ನದ ಪದಕ, 1೦೦ಮೀ ಫ್ರೀಸ್ಟೈಲ್ ನಲ್ಲಿ ಬೆಳ್ಳಿ ಪದಕ, 5೦ಮಿ ಬಟರ್‌ಫ್ಲೆನಲ್ಲಿ ಕಂಚಿನ ಪದಕವನ್ನು, ಕನಿಷ್ಕ್ ಎಸ್. ಜೆ- 4೦೦ಮೀ ಫ್ರೀಸ್ಟೈಲ್ ಬೆಳ್ಳಿ ಪದಕವನ್ನು ಹಾಗೂ 1೦೦ಮೀ ಫ್ರೀಸ್ಟೈಲ್ ಕಂಚಿನ ಪದಕವನ್ನು, ಬಿ.ಜಿ ಧಾರ್ಮಿಕ್ – 5೦ಮೀ ಹಾಗೂ 1೦೦ಮೀ ಬ್ರೆಸ್ಟ್‌ಸ್ಟ್ರೋಕ್ ವಿಭಾಗದಲ್ಲಿ ಬೆಳ್ಳಿಪದಕವನ್ನು ಸಂಪಾದಿಸಿ ಸಂಸ್ಥೆಯ 8 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.

ಜೊತೆಗೆ ಅಬ್ದಿನವರೂಪ್ 2೦೦ಮೀ ಫ್ರೀಸ್ಟೈಲ್ ಕಂಚಿನ ಪದಕ ಹಾಗೂ ಅಭಯ್ ಪಾಟೀಲ್ 2೦೦ಮೀ ಬ್ರೆಸ್ಟ್‌ಸ್ಟ್ರೋಕ್ ವಿಭಾಗದಲ್ಲಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ಈ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ, ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments