ಶ್ರೀ ವೆಂಕಟರಮಣ ಪ್ರಥಮ ದರ್ಜೆ ಕಾಲೇಜು ಕಾರ್ಕಳ ಇಲ್ಲಿ ವಾಣಿಜ್ಯ ಸಂಘ ಮತ್ತು
ಮಾನವಿಕ ಸಂಘಗಳ ಉದ್ಘಾಟನಾ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ
ಚಾಂಪಿಯನ್ಸ್ ಅಕೆಡಮಿಯ ಮ್ಯಾನೇಜರ್ ಶ್ರೀ ವಿಕಾಸ್ ಬಂಗೇರ ಅವರು ದೀಪ ಬೆಳಗಿಸುವುದರ
ಮೂಲಕ ಉದ್ಘಾಟಿಸಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ನೀಡುವುದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ಸಿದ್ಧತೆ ನಡೆಸಬೇಕು, ಅಧ್ಯಯನವನ್ನು ಹೇಗೆ ಯೋಜಿಸಿಕೊಳ್ಳಬೇಕು ಹಾಗೂ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಯಾವ ರೀತಿಯ ತಯಾರಿ ಅಗತ್ಯ ಎಂಬುದರ ಕುರಿತು ಉಪಯುಕ್ತ ಮಾಹಿತಿಯನ್ನು ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಗೀತಾ ಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಡಾ| ಶ್ವೇತಾ ಸ್ವಾಗತಿಸಿ, ಮುನೀರಾ ನಿರ್ವಹಿಸಿ, ಕು. ಅರ್ಪಿತಾ ಇವರು ಧನ್ಯವಾದವಿತ್ತರು.


























