Tuesday, September 29, 2026
Google search engine
Homeಹೆಬ್ರಿಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ರಜತ ಮಹೋತ್ಸವ: ಯಕ್ಷಗಾನ ಸಮ್ಮೇಳನ ಪೂರ್ವಭಾವಿ ಸಭೆ

ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ರಜತ ಮಹೋತ್ಸವ: ಯಕ್ಷಗಾನ ಸಮ್ಮೇಳನ ಪೂರ್ವಭಾವಿ ಸಭೆ

ದಶಕಗಳ ಅನಂತರ ಮುಂಬೈ ಮಹಾನಗರದಲ್ಲಿ ನಡೆಯುತ್ತಿರುವಂತಹ ಯಕ್ಷಗಾನ ಸಮ್ಮೇಳನದಲ್ಲಿ ಭಾಗವಹಿಸುವಂತಹ ಸದಾವಕಾಶ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಈ ಸುಸಂದರ್ಭವನ್ನು ಸರಿಯಾಗಿ ವಿನಿಯೋಗಿಸಿಕೊಳ್ಳುವ ಮೂಲಕ ಯಕ್ಷಗಾನ ಸಮ್ಮೇಳನವು ಯಶಸ್ವಿಯಾಗಿ ನಡೆಯಬೇಕು. ಸಮ್ಮೇಳನವು ಯಕ್ಷಗಾನ ಕ್ಷೇತ್ರದಲ್ಲಿ ಒಂದು ಮೈಲುಗಲ್ಲಿನಂತೆ ಸದಾ ನೆನಪಿನಲ್ಲಿಡುವಂತಾಗಬೇಕು ಎಂದು ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅವರು ನುಡಿದರು.

ಅವರು ನಗರದ ಪ್ರಖ್ಯಾತ ಯಕ್ಷಗಾನ ಕಲಾಸಂಘಟನೆಯದ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ರಜತಮಹೋತ್ಸವ ಸಂಭ್ರಮ ಅಂಗವಾಗಿ ಅ. 3 ಮತ್ತು 4ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಆದ್ದೂರಿಯಿಂದ ಜರಗಲಿರುವ ಯಕ್ಷಗಾನ ಸಮ್ಮೇಳನದ ಯಶಸ್ಸಿನ ಬಗ್ಗೆ ಚರ್ಚಿಸಲು ಸೆ.
27ರಂದು ಬಂಟರ ಭವನದಲ್ಲಿ ಜರಗಿದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮ್ಮೇಳನವನ್ನು ಯಶಸ್ವಿಗೊಳಿಸಲು ಕೇವಲ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರೊಬ್ಬರೇ ಶ್ರಮಿಸಿದರೆ ಸಾಧ್ಯವಾಗುವುದಿಲ್ಲ ನಾವು ಅವರಿಗೆ ಸದಾ ಬೆಂಬಲವನ್ನು ನೀಡಬೇಕು. ಅವರು ಸ್ವಾಗತ ಸಮಿತಿಯನ್ನು ಸ್ಥಾಪಿಸಿ ಆ ಮೂಲಕ ವಿವಿಧ ಉಪಸಮಿತಿಗಳನ್ನು ಮಾಡಿದ್ದಾರೆ. ಯಕ್ಷಗಾನ ಸಮ್ಮೇಳನ ಯಶಸ್ವಿಯಾಗಿ ಅದ್ದೂರಿಯಿಂದ ನಡೆಯಬೇಕು ಎಂಬುದೇ ನಮ್ಮೆಲ್ಲರ ಆಶಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಶ್ರಮಿಸೋಣ. ಅವರವರ ಜವಾಬ್ದಾರಿಯನ್ನು ಶ್ರದ್ದೆ ಹಾಗೂ ಪ್ರಾಮಾಣಿಕತೆಯಿಂದ ಮಾಡೋಣ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಸ್ವಾಗತ ಸಮಿತಿಯ ಕಾರ್ಯದರ್ಶಿ ಅಶೋಕ್ ಪಕ್ಕಳ ಅವರು ಪಾಲ್ಗೊಂಡು ಮಾತನಾಡಿ, ಸಮ್ಮೇಳನ ಯಶಸ್ವಿಗೊಳಿಸಲು ಸ್ಥಾಪಿಸಲಾದ ವಿವಿಧ ಉಪ ಸಮಿತಿಗಳು ಸದಸ್ಯರು ಸದಾ ಕ್ರಿಯಾಶೀಲವಾಗಿ ತಮ್ಮ ಕಾರ್ಯಗಳನ್ನು ನಿರ್ವಹಿಸಬೇಕು. ಇದು ಮುಂಬಯಿಗರಿಗೆ ಮತ್ತು ಯಕ್ಷಗಾನ ಪ್ರೇಮಿಗಳಿಗೆ ದೊರೆತ ಒಂದು ಸೌಭಾಗ್ಯ. ನಾವೆಲ್ಲರೂ ಕಲಾ ಪೋಷಕರು, ಕಲಾವಿದರು. ಯಕ್ಷಗಾನ ಎಂಬುದು ನಮಗೆಲ್ಲರಿಗೂ ಅತ್ಯಂತ ಪ್ರಿಯವಾದ ಕಲೆ. ಆದ್ದರಿಂದ ಸಮ್ಮೇಳನವನ್ನು ಯಶಸ್ವಿಗೊಳಿಸೋಣ ಎಂದರು.

ಸಂಘಟನ ಕಾರ್ಯದರ್ಶಿ ನವೀನ್ ಶೆಟ್ಟಿ ಇನ್ನ ಬಾಳಿಕೆ ಅವರು ಮಾತನಾಡಿ, ಕಾರ್ಯಕ್ರಮವು ಯಶಸ್ವಿಯಾಗಲು ಯಾವೆಲ್ಲಾ ರೀತಿಯಲ್ಲಿ ನಾವು ಮುಂದುವರಿಯಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು.

ಸಮ್ಮೇಳನದ ಕಾರ್ಯಾಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಸಮ್ಮೇಳನದ ಬಗ್ಗೆ ವಿವರಿಸಿ, ಸಮ್ಮೇಳವನ್ನು ಎಲ್ಲರೂ ಯಶಸ್ವಿಗೊಳಿಸಲು ಸಹಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ವಿವಿಧ ಉಪ ಸಮಿತಿಗಳ ಸದಸ್ಯರುಗಳಾದ ಪದ್ಮನಾಭ ಸಸಿಹಿತ್ತು ಸತೀಶ್ ಶೆಟ್ಟಿ ಕೊಟ್ರಪಾಡಿ, ವಿಜಯ ಶೆಟ್ಟಿ ಕುತ್ತೆತೂರು, ಸತೀಶ್ ಶೆಟ್ಟಿ ಎಣ್ಣೆ ಹೊಳೆ, ಪೃಥ್ವಿರಾಜ್, ಶೈಲೇಶ್ ಪುತ್ರನ್, ಅಮೃತಾ ಎ. ಶೆಟ್ಟಿ ಸುಜಲಾ ಎ. ಶೆಟ್ಟಿ ರತ್ನಾಕರ ಶೆಟ್ಟಿ ಚೆಂಬೂರು, ಜಯರಾಮ ಶೆಟ್ಟಿ ಜಗನ್ನಾಥ ಶೆಟ್ಟಿ ಸಾಣೂರು, ಸುರೇಶ್ ಶೆಟ್ಟಿಕಣಂಜಾರು, ಮೀರಾ ಶೆಟ್ಟಿ ನಂದಾ ಶೆಟ್ಟಿ ತನಿಷ್ಕಾ ಶೆಟ್ಟಿ ತ್ರಿಶಾ ಶೆಟ್ಟಿ ನಯನಾ ಶೆಟ್ಟಿ ಉಷಾ ಸತೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.

ಯಕ್ಷಗಾನ ಸಮ್ಮೇಳನದಲ್ಲಿ ಯಕ್ಷಗಾನಕ್ಕೆ ಸಂಬಂಧಪಟ್ಟ ವಿವಿಧ ಕಾರ್ಯಕ್ರಮಗಳು ಜರಗಲಿದೆ. ಯಕ್ಷಗಾನ ಬಗೆಗಿನ ಯಕ್ಷಗಾನ ಪ್ರದರ್ಶನ ಗೊಂಬೆಯಾಟ, ಕೃತಿ ಬಿಡುಗಡೆ, ಯಕ್ಷಗಾನಕ್ಕೆ ಸಂಬಂಧಪಟ್ಟ ಕಲಾಕೃತಿಗಳ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನ, ಮಾತ್ರವಲ್ಲದೇ ವಿಶೇಷವಾಗಿ ಸಮ್ಮಾನ ರಜತ ಯಕ್ಷ ರಕ್ಷಾ ಕಲಾ ಪ್ರಶಸ್ತಿ, ಮಾತೃಶ್ರೀ ರಜತ ಯಕ್ಷ ರಕ್ಷಕಲಾ ಪ್ರಶಸ್ತಿ ಇನ್ನಿತರ ಪ್ರಶಸ್ತಿಗಳನ್ನು ಯಕ್ಷಗಾನಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಹಲವಾರು ಗಣ್ಯರಿಗೆ ಈ ಸಂದರ್ಭದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ಕಾರ್ಯಕ್ರಮದ ಬಗ್ಗೆ ಸಂಘಟಕರು ಮಾಹಿತಿಯನ್ನು ನೀಡಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments