ಕನ್ನಡಭಾಷೆಯು ಪುಟ್ಟ ಮಕ್ಕಳ ಬಾಯಲ್ಲಿ ನುಡಿಯುವ ತೊದಲು ಭಾಷೆ. ಅದಕ್ಕಾಗಿ ಚಿಕ್ಕವರಿರುವಾಗಲೇ ನಮ್ಮ ನಾಡು ನುಡಿಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕಥೆಯ ಮೂಲಕ ಅಮೃತ ಭಾರತಿ ವಿದ್ಯಾಕೇಂದ್ರದ ಕನ್ನಡ ಶಿಕ್ಷಕಿ ಅಕ್ಷತಾ ಮಾತಾಜಿ ಇವರು ಹೆಬ್ರಿ ಸೇವಾ ಸಂಗಮ ಅಮೃತ ಭಾರತಿ ಶಿಶು ಮಂದಿರದ ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ತಿಳಿಸಿದರು. ಶಿಶು ಮಂದಿರದ ಮುಖ್ಯ ಶಿಕ್ಷಕಿ ಮೀನಾಕ್ಷಿ ಮಾತಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಲ್ಲಿಕಾ ಮಾತಾಜಿ ನಿರೂಪಿಸಿ, ವಂದಿಸಿದರು.
ಈ ಸಂದರ್ಭದಲ್ಲಿ ಅನಿತಾ ಮಾತಾಜಿ ಮತ್ತು ನಿವೇದಿತಾ ಸಹಕರಿಸಿದರು. ಮಕ್ಕಳಿಂದ ಕನ್ನಡ ನಾಡು ನುಡಿಗೆ ಸಂಬಂಧಿಸಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
































