ಬದುಕಿನಲ್ಲಿ ಅವಕಾಶಗಳು ಯಾವುದೇ ಸಂದರ್ಭದಲ್ಲಿ ಬಂದರು ಬಳಸಿಕೊಳ್ಳಬೇಕಾದುದು ಅತೀ ಅಗತ್ಯ. ನೀವೆಲ್ಲಾ ವಿದ್ಯಾರ್ಥಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ. ಕಳೆದ ಹನ್ನೆರಡು ವರ್ಷದಿಂದ ನಿರಂತರವಾಗಿ ನಡೆಯುವ ವಿದ್ಯಾರ್ಥಿ ಕವಿಗೋಷ್ಠಿಯಲ್ಲಿ ಅನೇಕ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡಿದ್ದಾರೆ ಎಂದು ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯವರಾದ ಸಪ್ನಾ ಎನ್ ಶೆಟ್ಟಿ ಹೇಳಿದರು.
ಇವರು ಎಸ್.ಆರ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಂಘ ಮತ್ತು ಸಾಂಸ್ಕೃತಿಕ ಸಂಘದ ಸಮಾರೋಪ ಸಮಾರಂಭ ಹಾಗೂ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ ವಿದ್ಯಾರ್ಥಿ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಈ ಸಂದರ್ಭ ವೇದಿಕೆಯಲ್ಲಿ ಎಸ್.ಆರ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ್, ಕನ್ನಡ ಸಾಹಿತ್ಯ ಸಂಘ ಮತ್ತು ಸಾಂಸ್ಕೃತಿಕ ಸಂಘದ ಸಂಚಾಲಕರಾದ ದೀಪಕ್ ಎನ್ ಅವರು ಉಪಸ್ಥಿತರಿದ್ದು ವಿದ್ಯಾರ್ಥಿಗಳು ವಾಚಿಸಿದ ಕವನಗಳಿಗೆ ಪ್ರತಿಕ್ರಿಯೆ ನೀಡಿದರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ ಕವನ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ನಡೆದ ವಿದ್ಯಾರ್ಥಿ ಕವಿಗೋಷ್ಠಿಯಲ್ಲಿ ವಿದ್ಯಾರ್ಥಿ ಕವಿಗಳಾದ ವಂಶಿತಾ, ಸಮನ್ವಿತಾ, ಐಶ್ವರ್ಯ ಎಸ್ ಶೆಟ್ಟಿ, ಹೇಮಂತ್ ಎಚ್.ಕೆ, ನೇಸರ ಎ.ಎನ್, ಇಂಚರ ಡಿ ಶೆಟ್ಟಿ, ಸ್ವರ್ಣಿಕಾ ಎಸ್ ಶೆಟ್ಟಿ, ಶಶಿಧರ್ ಎಸ್ ವೈ, ದಿಗಂತ್ ಎಸ್ ನಾಯ್ಕ್, ಶ್ಯಾಮಿಲಿ ಆಚಾರ್ಯ, ಶ್ರೀನಿತಾ, ಮಂಜುಶ್ರೀ ಕವನ ವಾಚನ ಮಾಡಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಐಶ್ವರ್ಯ ಎಸ್ ಶೆಟ್ಟಿ ನಿರೂಪಿಸಿ, ಶ್ಯಾಮಿಲಿ ಆಚಾರ್ಯ ಸ್ವಾಗತಿಸಿ, ಸಂಜನಾ ವರದಿ ವಾಚಿಸಿ, ಸಮನ್ವಿತಾ ಶೆಟ್ಟಿ ವಂದಿಸಿದರು.































