Tuesday, September 29, 2026
Google search engine
Homeಕಾರ್ಕಳಕಾರ್ಕಳ: ಮಗನ ಕಿರಿಕಿರಿ ತಾಳಲಾರದೆ ಕತ್ತಿಯಿಂದ ಹಲ್ಲೆ ನಡೆಸಿದ ತಂದೆ

ಕಾರ್ಕಳ: ಮಗನ ಕಿರಿಕಿರಿ ತಾಳಲಾರದೆ ಕತ್ತಿಯಿಂದ ಹಲ್ಲೆ ನಡೆಸಿದ ತಂದೆ

ದಿನನಿತ್ಯ ಮದ್ಯ ಸೇವಿಸಿ ಬಂದು ಮನೆಯಲ್ಲಿ ಕಿರಿಕಿರಿ ಮಾಡುತ್ತಿದ್ದ ಮಗನನ್ನು ತಂದೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಕಾರ್ಕಳದ ದುರ್ಗಾ ಗ್ರಾಮದ ಪುಲ್ಲಾಟ್‌ ನಲ್ಲಿ ನಡೆದಿದೆ. ಗಾಯಾಳು ಮಗ ಚಾಲ್ಸ್ ನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಲ್ಸ್ ನ ತಾಯಿ ಮನೆಯ ಪಕ್ಕದಲ್ಲಿ ಇನ್ನೊಂದು ಮನೆ ಕಟ್ಟುತ್ತಿದ್ದು, ಸೆ. 28 ರಂದು ರಾತ್ರಿ ಚಾಲ್ಸ್, ಹೊಸ ಮನೆಯನ್ನು ನನಗೆ ಬಿಟ್ಟುಕೊಡಬೇಕೆಂದು ಜಗಳವಾಡುವ ವೇಳೆ, ಬಿಡಿಸಲು ಬಂದ ತಂದೆಯನ್ನು ತಳ್ಳಿ, ಬಳಿಕ ತಂದೆಗೇ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ತಂದೆ ಮಥಾಯ್‌ ಅಲ್ಲೇ ಇದ್ದ ತೋಟದ ಕೆಲಸಕ್ಕೆ ಬಳಸುವ ಕತ್ತಿಯಿಂದ ನಿನ್ನ ಉಪದ್ರ ಸಾಕಾಗಿದೆ, ನಿನ್ನ ಕೊಂದೆ ಬಿಡುತ್ತೇನೆ ಎಂದು ಕತ್ತಿಯಿಂದ ಚಾಲ್ಸ್‌ ನನ್ನು ಕಡಿದ ಪರಿಣಾಮ ಚಾಲ್ಸ್‌ ನ ಕುತ್ತಿಗೆಯ ಭಾಗ ಹಾಗೂ ಎದೆಯ ಭಾಗಕ್ಕೆ ತೀವ್ರ ತರವಾದ ರಕ್ತ ಗಾಯಾವಾಗಿದ್ದು, ತದನಂತರದಲ್ಲಿ ಅಂಬುಲೆನ್ಸ್‌ ನಲ್ಲಿ ಗಾಯಾಳುವನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತು.

ಈ ಬಗ್ಗೆ ಗಾಯಾಳುವಿನ ತಾಯಿ ನೀಡಿದ ದೂರಿನ ಅನ್ವಯ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments