ದಿ. ಎಂಜೆಎಫ್ ಲಯನ್ ಚಂದ್ರಹಾಸ ಸುವರ್ಣ ಅವರ ಸ್ಮರಣಾರ್ಥ ಲಯನ್ಸ್ ಕ್ಲಬ್ ವತಿಯಿಂದ, ಎಕ್ಸೆಲೆನ್ಸ್ ಪ್ರೊಫೆಷನಲ್ ಡಿಗ್ರಿ ಕಾಲೇಜು ಕಾರ್ಕಳ, ರಕ್ತ ನಿಧಿ ಘಟಕ ಜಿಲ್ಲಾ ಆಸ್ಪತ್ರೆ ಉಡುಪಿ, ನಿಟ್ಟೆ ಗಾಜ್ರಿಯಾ ಆಸ್ಪತ್ರೆ ಕಾರ್ಕಳ ಹಾಗೂ ಡಾಕ್ಟರ್ ಅಗರ್ವಾಲ್ ಕಣ್ಣಿನ ಆಸ್ಪತ್ರೆ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಬ್ರಹತ್ ರಕ್ತದಾನ ಶಿಬಿರ, ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಬಿಲ್ಲವ ಸಂಘ ಕಾರ್ಕಳ, ಮಹಾಲಿಂಗೇಶ್ವರ ಯುವಕ ಮಂಡಲ ಹಾಗೂ ಮಹಿಳಾ ಮಂಡಲ ಪೆರ್ವಾಜೆ, ಯುವ ವಾಹಿನಿ ಕಾರ್ಕಳ ಘಟಕ, ಗುಡ್ಡೆಯಂಗಡಿ ಫ್ರೆಂಡ್ಸ್ ಕಾರ್ಕಳ, ಎಸ್‌ಸಿಐ ಕಾರ್ಕಳ ರಾಕ್ ಸಿಟಿ, ಕ್ಯಾಥೊಲಿಕ್ ಸಭಾ ಕಾರ್ಕಳ ಟೌನ್, ಐಸಿವೈಎಂ ಕಾರ್ಕಳ ಟೌನ್, ಜಸ್ಟಿಸ್ ಆಂಡ್ ಪೀಸ್ ಕಮಿಷನ್, ಹೆಲ್ತ್ ಕಮಿಷನ್ ಕ್ರೈಸ್ಟ್ ಕಿಂಗ್ ಚರ್ಚ್ ಕಾರ್ಕಳ, ಫ್ರೆಂಡ್ಸ್ ಪವರ್ ಜಿಮ್ ಜೋಡುರಸ್ತೆ, ಸೇವಾ ಧರ್ಮ ಸಂಸ್ಥೆ ಕಾರ್ಕಳ, ಕಾರ್ಕಳ ಸ್ಪೋರ್ಟ್ಸ್ ಕ್ಲಬ್ ಹಾಗೂ ಇಂಜಿನಿಯರ್ಸ್ ಅಸೋಸಿಯೇಷನ್ ಕಾರ್ಕಳ ಸಹಭಾಗಿತ್ವ ವಹಿಸಿವೆ.
ಇದರ ಜೊತೆಗೆ ಎ.ಬಿ. ಶೆಟ್ಟಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್, ಮಂಗಳೂರು ಇವರ ನೇತೃತ್ವದಲ್ಲಿ ಉಚಿತ ದಂತ ತಪಾಸಣಾ ಶಿಬಿರವೂ ನಡೆಯಲಿದೆ.
ಶಿಬಿರವು 2026ರ ಅಕ್ಟೋಬರ್ 3ರಂದು (ಶನಿವಾರ) ಬೆಳಿಗ್ಗೆ 9.30ರಿಂದ ಸಂಜೆ 3.30ರವರೆಗೆ ಕಾರ್ಕಳದ ಎಕ್ಸೆಲೆನ್ಸ್ ಪ್ರೊಫೆಷನಲ್ ಡಿಗ್ರಿ ಕಾಲೇಜು ಸಮೀಪದ ಕ್ರೈಸ್ಟ್ ಕಿಂಗ್ ಚರ್ಚ್ ಕ್ಯಾಂಪಸ್ ಹತ್ತಿರದ ಗಾಂಧಿ ಮೈದಾನದಲ್ಲಿ ನಡೆಯಲಿದೆ.


























