Wednesday, September 30, 2026
Google search engine
Homeಹೆಬ್ರಿಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪಿ.ಯು ಕಾಲೇಜು, ಹೆಬ್ರಿ: 2027-28ನೇ ಸಾಲಿನ ಪಿಯು ಪ್ರವೇಶಾತಿಗೆ...

ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪಿ.ಯು ಕಾಲೇಜು, ಹೆಬ್ರಿ: 2027-28ನೇ ಸಾಲಿನ ಪಿಯು ಪ್ರವೇಶಾತಿಗೆ ಉಚಿತ ಶಿಕ್ಷಣದ ಸುವರ್ಣಾವಕಾಶ

ಹೆಬ್ರಿ : ಅಮೃತ ಭಾರತಿ ಟ್ರಸ್ಟ್‌ನ ವತಿಯಿಂದ ನಡೆಸಲ್ಪಡುತ್ತಿರುವ ಹೆಬ್ರಿಯ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪಿಯು ಕಾಲೇಜಿನಲ್ಲಿ 2027-28ನೇ ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಆರಂಭವಾಗಿದ್ದು, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗಾಗಿ ವಿಶೇಷ ಉಚಿತ ಶಿಕ್ಷಣ ಯೋಜನೆ ಘೋಷಿಸಲಾಗಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಚಿತ ಶಿಕ್ಷಣದ ವಿವರ:ಕಾಲೇಜು ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಟಾಪ್ 3 ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ 100% ಉಚಿತ ಶಿಕ್ಷಣ ಹಾಗೂ ಮುಂದಿನ 3 ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ 50% ಶುಲ್ಕ ವಿನಾಯಿತಿ ನೀಡಲಾಗುವುದು. ಅಲ್ಲದೆ SSLC ಯಲ್ಲಿ ರಾಜ್ಯಕ್ಕೆ 1 ರಿಂದ 10ನೇ gÁåAPï ಪಡೆದ ಹಾಗೂ CBSE/ICSE ಯಲ್ಲಿ 95% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಸೇರಿದಂತೆ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುವುದು.

ಕೋರ್ಸ್‌ಗಳು: ವಿಜ್ಞಾನ ವಿಭಾಗದಲ್ಲಿ PCMB, PCMCs, PCMS ಹಾಗೂ ವಾಣಿಜ್ಯ ವಿಭಾಗದಲ್ಲಿ EBACs, EBAS ಕೋರ್ಸ್‌ಗಳು ಲಭ್ಯವಿದ್ದು, NEET/JEE/KCET ಗಾಗಿ ಇಂಟಿಗ್ರೇಟೆಡ್ ತರಬೇತಿ ನೀಡಲಾಗುವುದು.

ಪ್ರವೇಶ ಪರೀಕ್ಷೆಯ ವಿವರ:

ದಿನಾಂಕ: 25/10/2026 ಮತ್ತು 01/11/2026 (ಭಾನುವಾರ)

ಸಮಯ: ಬೆಳಿಗ್ಗೆ 10 ರಿಂದ 12 ಮತ್ತು 11 ರಿಂದ 1

ಪರೀಕ್ಷಾ ಮಾದರಿ: 9 ಮತ್ತು 10ನೇ ತರಗತಿಯ ಗಣಿತ ಮತ್ತು ವಿಜ್ಞಾನ ವಿಷಯಗಳಿಂದ 80 ಬಹು ಆಯ್ಕೆ ಪ್ರಶ್ನೆಗಳು (ಸರಿ ಉತ್ತರಕ್ಕೆ 4 ಅಂಕ, ತಪ್ಪು ಉತ್ತರಕ್ಕೆ -1 ಅಂಕ).

ಹೆಚ್ಚಿನ ಮಾಹಿತಿಗಾಗಿ ಕಚೇರಿ ಮೊ. 7259003868/99, ಪ್ರಾಂಶುಪಾಲರು 7259003867, PRO 8747808855 ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments