Friday, October 2, 2026
Google search engine
Homeಕಾರ್ಕಳನಿಟ್ಟೆ: ಬೆಂಗಳೂರಿನ ಜಪಾನ್‌ ಕಾನ್ಸುಲ್‌ ಜನರಲ್‌ ನವಾತಾ ಹಿರೋಶಿ ಅವರಿಂದ "ಸೆಂಟರ್ಸ್ ಆಫ್‌ ಎಕ್ಸಲೆನ್ಸ್‌"...

ನಿಟ್ಟೆ: ಬೆಂಗಳೂರಿನ ಜಪಾನ್‌ ಕಾನ್ಸುಲ್‌ ಜನರಲ್‌ ನವಾತಾ ಹಿರೋಶಿ ಅವರಿಂದ “ಸೆಂಟರ್ಸ್ ಆಫ್‌ ಎಕ್ಸಲೆನ್ಸ್‌” ಉದ್ಘಾಟನೆ

ಜಪಾನ್‌ನ ತಂತ್ರಜ್ಞಾನ ಹಾಗೂ ಕೈಗಾರಿಕಾ ಅನುಭವಕ್ಕೆ ಭಾರತದ ಯುವಶಕ್ತಿ ಮತ್ತು ಡಿಜಿಟಲ್ ಸಾಮರ್ಥ್ಯವನ್ನು ಜೋಡಿಸುವ ಮೂಲಕ ಹೊಸ ತಂತ್ರಜ್ಞಾನ ಹಾಗೂ ಉದ್ಯಮ ಅವಕಾಶಗಳನ್ನು ಸೃಷ್ಟಿಸಬಹುದು ಎಂದು ಬೆಂಗಳೂರಿನ ಜಪಾನ್‌ ಕಾನ್ಸುಲ್‌ ಜನರಲ್‌ ನವತಾ ಹಿರೋಷಿ ಅಭಿಪ್ರಾಯಪಟ್ಟರು.

ಗುರುವಾರ ನಿಟ್ಟೆ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿನ ನಿಟ್ಟೆ ಫ್ಯೂಚರ್‌ ಸ್ಪೇಸ್‌ನಲ್ಲಿ ಸೆಂಟರ್ಸ್ ಆಫ್‌ ಎಕ್ಸಲೆನ್ಸ್‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಯುವಜನರ ಚೈತನ್ಯ ಹಾಗೂ ಭವಿಷ್ಯದತ್ತ ಸಾಗುವ ಉತ್ಸಾಹ ತಮ್ಮನ್ನು ಪ್ರಭಾವಿತಗೊಳಿಸಿದೆ ಎಂದರು. ಎರಡೂ ದೇಶಗಳ ಕೈಗಾರಿಕಾ ಹಾಗೂ ತಾಂತ್ರಿಕ ಸಾಮರ್ಥ್ಯಗಳ ಸಹಕಾರದಿಂದ ಹೊಸ ಅವಕಾಶಗಳನ್ನು ರೂಪಿಸಬಹುದು ಎಂದು ಹೇಳಿದರು.

ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಎಂ.ಎಸ್. ಮೂಡಿತ್ತಾಯ ಕಾರ್ಯಕ್ರಮಕ್ಕೆ ಶುಭಹಾರೈಸಿ ಇಂತಹ ಕೇಂದ್ರಗಳು ವಿದ್ಯಾರ್ಥಿಗಳನ್ನು ಪ್ರಸ್ತುತ ಕಾರ್ಪರೇಟ್ ಜಗತ್ತಿಗೆ ಅಣಿಗೊಳಿಸಲು ಮಹತ್ವದ ಪಾತ್ರ ವಹಿಸುತ್ತದೆ, ಇಂತಹ ಪ್ರಯತ್ನಕ್ಕೆ ನಿಟ್ಟೆ ವಿವಿಯ ಅಂತಾರಾಷ್ಟ್ರೀಯ ಸಹಯೋಗ ವಿಭಾಗದ ನಿರ್ದೇಶಕ ಪ್ರೊ.ಹರಿಕೃಷ್ಣ ಭಟ್ ಹಾಗೂ  ಯಸುಕೊ ಸಾಟೊ ಅವರ ಕೊಡುಗೆ ಶ್ಲಾಘನೀಯ ಎಂದರು.

ಜಪಾನ್‌ನ ತಕಾವೊ ಕೊಗ್ಯೊ ಕಂಪನಿ ಲಿಮಿಟೆಡ್‌ನ ಅಧ್ಯಕ್ಷ ಹಾಗೂ ಸಿಇಒ ಯುತಾಕಾ ಶಿಮೊಮುರಾ ಮಾತನಾಡಿ, ಭಾರತ ಮತ್ತು ಜಪಾನ್‌ನ ಯುವ ಪ್ರತಿಭೆಗಳು ಹಾಗೂ ಕೈಗಾರಿಕಾ ಕ್ಷೇತ್ರದ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದರು. ಜಪಾನ್‌ಗೆ ತೆರಳುತ್ತಿರುವ ನಿಟ್ಟೆಯ ವಿದ್ಯಾರ್ಥಿಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದ್ದಾರೆ. ಕಳೆದ ವರ್ಷ 115 ವಿದ್ಯಾರ್ಥಿಗಳು ಜಪಾನ್‌ಗೆ ತೆರಳಿದ್ದು, 2027ರಲ್ಲಿ ಇನ್ನಷ್ಟು ವಿದ್ಯಾರ್ಥಿಗಳನ್ನು ಕರೆಯಿಸಿಕೊಳ್ಳುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ವಿಫ್ಲಿ ಇಂಡಿಯಾ ಎಲ್‌ಎಲ್‌ಪಿಯ ಇಂಡಿಯಾ ಆಪರೇಷನ್ಸ್ ಮುಖ್ಯಸ್ಥ ಸುಮಂತ್ ಪಡಿವಾಳ್ ಅವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ನಿಟ್ಟೆ ಡೀಮ್ಡ್‌ ಟು ಬಿ ಯೂನಿವರ್ಸಿಟಿಯ ಕುಲಾಧಿಪತಿ ಹಾಗೂ ಕಾರ್ಯಕ್ರಮದ ಅಧ್ಯಕ್ಷ ವಿಶಾಲ್ ಹೆಗ್ಡೆ ಮಾತನಾಡಿ, ಶಿಕ್ಷಣದ ಜತೆಗೆ ಕೈಗಾರಿಕಾ ಹಾಗೂ ಅಂತಾರಾಷ್ಟ್ರೀಯ ಸಹಭಾಗಿತ್ವಕ್ಕೆ ಸಂಸ್ಥೆ ಆದ್ಯತೆ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಜಾಗತಿಕ ತಂತ್ರಜ್ಞಾನ ಮತ್ತು ಕೈಗಾರಿಕಾ ಅನುಭವ ದೊರೆಯುವಂತೆ ಹೊಸ ಅವಕಾಶಗಳನ್ನು ರೂಪಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಆಟೋಲಿವ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಆರ್‌ಡಿಇ ವಿಭಾಗದ ಪ್ರಧಾನ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿ., ಕೊಬಯಶಿ ಕ್ರಿಯೇಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಕೋಕಿ ಕಾಟೊ, ಬೆಂಗಳೂರಿನ ಜಪಾನ್ ಉಪ ಕಾನ್ಸುಲ್ ಜುನ್ ಹೊಮ್ಮ, ಟಿಕೆಇ ಕಂಪನಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಜೂನಿಚಿ ಗೋಯಾ ಹಾಗೂ ವಿಪ್ರೊ 3ಡಿಯ ಪ್ರಧಾನ ವ್ಯವಸ್ಥಾಪಕ ಮತ್ತು ವ್ಯವಹಾರ ಮುಖ್ಯಸ್ಥ ಯತಿರಾಜ್ ಕಸಲ್ ಹಾಗೂ ನಿಟ್ಟೆ ಜಪಾನ್ ಸಹಯೋಗದ ಮ್ಯಾನೇಜರ್ ಯಸುಕೊ ಸಾಟೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳುಣ್ಕರ್ ಸ್ವಾಗತಿಸಿದರು. ನಿಟ್ಟೆ ವಿವಿ ಯ ಅಂತಾರಾಷ್ಟ್ರೀಯ ಸಹಯೋಗ ವಿಭಾಗದ ನಿರ್ದೇಶಕ ಪ್ರೊ. ಹರಿಕೃಷ್ಣ ಭಟ್ ಅವರು ನಿಟ್ಟೆ ಸಂಸ್ಥೆಯ ಜಪಾನ್‌ ಸಹಯೋಗ ಹಾಗೂ ಸೆಂಟರ್ಸ್ ಆಫ್‌ ಎಕ್ಸಲೆನ್ಸ್‌ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಅಬಿವೃದ್ದಿ, ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ಭರತ್ ಜಿ. ಕುಮಾರ್ ವಂದಿಸಿದರು. ವಿದ್ಯಾರ್ಥಿನಿಯರಾದ ಗ್ಲ್ಯಾಡಿಯಾ, ನಿಲಿಮಾ ಭಕ್ತಾ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments