Wednesday, October 7, 2026
Google search engine
Homeಕಾರ್ಕಳನಿಟ್ಟೆ : ಅ.7ರಂದು ಸಂಗೀತಾಸಕ್ತರನ್ನು ರಂಜಿಸಲಿರುವ ‘ಸಂಗೀತಾಮೃತ’

ನಿಟ್ಟೆ : ಅ.7ರಂದು ಸಂಗೀತಾಸಕ್ತರನ್ನು ರಂಜಿಸಲಿರುವ ‘ಸಂಗೀತಾಮೃತ’

ಭಾರತೀಯ ಶಾಸ್ತ್ರೀಯ ಸಂಗೀತದ ಸೊಗಡನ್ನು ಯುವಜನತೆಗೆ ಪರಿಚಯಿಸುವ ಹಾಗೂ ಸಂಗೀತಾಸಕ್ತರಿಗೆ ಅಪೂರ್ವ ಅನುಭವ ನೀಡುವ ಉದ್ದೇಶದಿಂದ ನಿಟ್ಟೆ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ‘ಕಲಾಸಂಗಮ’ ವಿದ್ಯಾರ್ಥಿ ಕ್ಲಬ್ ಸಹಯೋಗದಲ್ಲಿ ‘ಸಂಗೀತಾಮೃತ’ ಸಂಗೀತ ಕಾರ್ಯಕ್ರಮ ಅ.7ರಂದು ನಡೆಯಲಿದೆ.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಸಂಭ್ರಮ ಆಡಿಟೋರಿಯಂನಲ್ಲಿ ಮಧ್ಯಾಹ್ನ 2ರಿಂದ ಸಂಜೆ 4.30ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಖ್ಯಾತಿಯ ವಿದುಷಿ ಸಂಗೀತಾ ಬಾಲಚಂದ್ರ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ವಿದುಷಿ ಸಂಗೀತಾ ಬಾಲಚಂದ್ರ ಅವರಿಗೆ ಸಹವಾದ್ಯದಲ್ಲಿ ಗುರುರಾಜ್ ಎಂ.ಬಿ. (ಕೀಬೋರ್ಡ್), ಪ್ರಭಾಕರ್ ಅಮ್ಮನಗೋಡ (ರಿದಮ್ ಪ್ಯಾಡ್), ಸಮರ್ಥ್ ಶೆಣೈ (ಕೊಳಲು) ಹಾಗೂ ಪ್ರದೀಪ್ ಆಚಾರ್ಯ (ತಬಲಾ) ಸಾಥ್ ನೀಡಲಿದ್ದಾರೆ.

ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸೊಬಗನ್ನು ಆಸ್ವಾದಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಕಾರ್ಯಕ್ರಮವನ್ನು @NMAMInstituteofTechnology ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments