ಕೇಂದ್ರ ಸರಕಾರದ ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯ ಕುರಿತು ಮೆಸ್ಕಾಂ ಕಾರ್ಕಳ ಉಪವಿಭಾಗದಲ್ಲಿ ಅ. 13ರಿಂದ 15ರ ವರೆಗೆ ವಿಶೇಷ ಅಭಿಯಾನ ಆಯೋಜಿಸಲಾಗಿದೆ.
ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಿ ಕೊಳ್ಳಲು ಇಚ್ಛಿಸುವ ಗ್ರಾಹಕರಿಗೆ ಯೋಜನೆಯ ಮಾಹಿತಿ, ಅರ್ಜಿ ನೋಂದಣಿ, ಸಹಾಯಧನ ಹಾಗೂ ಬ್ಯಾಂಕ್ ಸಾಲ ಸೌಲಭ್ಯದ ಕುರಿತು ಸ್ಥಳದಲ್ಲೇ ಮಾಹಿತಿ ನೀಡಲಾಗುವುದು.
ಅರ್ಜಿ ಸಲ್ಲಿಸಲು ಇತ್ತೀಚಿನ ವಿದ್ಯುತ್ ಬಿಲ್, ಅರ್ಜಿದಾರರ ಸರಕಾರಿ ಗುರುತಿನ ಚೀಟಿ ಹಾಗೂ ಬ್ಯಾಂಕ್ ವಿವರಗಳು ಅಗತ್ಯ ವಿದ್ದು, ಸಾರ್ವಜನಿಕರು ವಿಶೇಷ ಕೌಂಟರ್‌ನ ಸದುಪಯೋಗ ಪಡೆದುಕೊಳ್ಳುವಂತೆ ಮೆಸ್ಕಾಂ ಪ್ರಕಟನೆ ತಿಳಿಸಿದೆ.




























