Friday, October 9, 2026
Google search engine
Homeಕಾರ್ಕಳಕ್ರೈಸ್ಟ್ ಕಿಂಗ್: ಧ್ಯಾನ ಮತ್ತು ಏಕಾಗ್ರತೆ ತರಬೇತಿ ಕಾರ್ಯಕ್ರಮ

ಕ್ರೈಸ್ಟ್ ಕಿಂಗ್: ಧ್ಯಾನ ಮತ್ತು ಏಕಾಗ್ರತೆ ತರಬೇತಿ ಕಾರ್ಯಕ್ರಮ

ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗಾಗಿ ಧ್ಯಾನ ಮತ್ತು ಏಕಾಗ್ರತೆ ಎಂಬ ವಿಷಯದಲ್ಲಿ ತರಬೇತಿ ಮತ್ತು ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ಅರೋಹ ಸ್ಪೇಸ್ ಅಕಾಡೆಮಿಯ ಯೋಗ ತರಬೇತುದಾರರಾದ ಪ್ರಿಯಾ ಕೆ.ವಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಕಾರ್ಯಕ್ರಮ ನಡೆಸಿಕೊಟ್ಟರು.

ತರಬೇತಿ ನೀಡಿ ಮಾತನಾಡಿದ ಅವರು “ನಮ್ಮ ಮನಸ್ಸಿನಲ್ಲಿ ಹುದುಗಿರುವ ಋಣಾತ್ಮಕ ಆಲೋಚನೆಗಳನ್ನು ದೂರ ಮಾಡಿ ಧನಾತ್ಮಕ ಚಿಂತನೆಗಳನ್ನು ನಮ್ಮಲ್ಲಿ ಬೆಳೆಸಿ ಜೀವನದಲ್ಲಿ ಯಶಸ್ಸನ್ನು ಸಾಧಿಸುವಲ್ಲಿ ಧ್ಯಾನ ಅತೀ
ಮುಖ್ಯ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಾದ ನೀವು ನಿರಂತರ ಧ್ಯಾನವನ್ನು ಮಾಡಿ ಕ್ರೀಯಾಶೀಲ ವ್ಯಕ್ತಿತ್ವವನ್ನು ನಿಮ್ಮಲ್ಲಿ ಬೆಳೆಸಿಕೊಳ್ಳಿ.” ಎಂದು ಹೇಳಿದರು. ನಂತರ ವಿದ್ಯಾರ್ಥಿಗಳಿಗೆ ಧ್ಯಾನ ತರಬೇತಿ ನಡೆಯಿತು.

ಸಂಸ್ಥೆಯ ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ  ಜೋಸ್ನಾ ಸ್ನೇಹಲತಾ ಅವರು ಈ ಸಂದರ್ಭದಲ್ಲಿ
ಉಪಸ್ಥಿತರಿದ್ದರು. ಪ್ರೌಢ ಶಾಲಾ ವಿಭಾಗದ ಶಿಕ್ಷಕಿ  ರೇಖಾಸಂತೋಷ್ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments