ಕಾರ್ಕಳ ತಾಲೂಕಿನ ಪುಲ್ಕೇರಿ ಬೈಪಾಸ್ ರಸ್ತೆಯಲ್ಲಿರುವ ಹೋಟೆಲ್ ‘KARKALA INN’ ಸಮೀಪ ನೂತನವಾಗಿ ನಿರ್ಮಿಸಲಾಗಿರುವ ಸುಸಜ್ಜಿತ ಹೊರಾಂಗಣ ಸಭಾಭವನ ‘ರಾವ್ ಗಾರ್ಡನ್’ ಇಂದು (ಅ.21) ಸಂಜೆ 6.30ಕ್ಕೆ ಉದ್ಘಾಟನೆಗೊಳ್ಳಲಿದೆ. ಉದ್ಘಾಟನಾ ಸಮಾರಂಭದ ಪ್ರಯುಕ್ತ ‘ಗೆಜ್ಜೆ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಕಾರ್ಕಳದ ಹೃದಯಭಾಗದಲ್ಲಿರುವ ರಾವ್ ಗಾರ್ಡನ್ ಶುಭ ಸಮಾರಂಭಗಳು ಹಾಗೂ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಅನುಕೂಲವಾಗುವಂತೆ ವಿಶಾಲವಾದ ಗಾರ್ಡನ್ ವ್ಯವಸ್ಥೆ ಮತ್ತು ಅಗತ್ಯ ಸೌಲಭ್ಯಗಳನ್ನು ಹೊಂದಿದೆ.
ಸುಮಾರು 700 ಮಂದಿ ಕುಳಿತುಕೊಳ್ಳಬಹುದಾದ ಆಸನ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್ ಸೌಲಭ್ಯ ಹಾಗೂ ಅತ್ಯುತ್ತಮ ಕ್ಯಾಟರಿಂಗ್ ವ್ಯವಸ್ಥೆಯನ್ನು ಇಲ್ಲಿ ಕಲ್ಪಿಸಲಾಗಿದೆ. ಮದುವೆ, ಆರತಕ್ಷತೆ, ಹುಟ್ಟುಹಬ್ಬ, ನಿಶ್ಚಿತಾರ್ಥ ಸೇರಿದಂತೆ ವಿವಿಧ ಶುಭ ಸಮಾರಂಭಗಳನ್ನು ಆಯೋಜಿಸಲು ಇದು ಸೂಕ್ತ ಸ್ಥಳವಾಗಿದೆ. ಸಮೀಪದಲ್ಲೇ HUT BAR ಸೌಲಭ್ಯವೂ ಲಭ್ಯವಿದೆ.
ರಾವ್ ಗಾರ್ಡನ್‌ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಸಭಾಂಗಣವನ್ನು ಬುಕ್ ಮಾಡಲು ಆಸಕ್ತರು 9902207666 ಅಥವಾ 9945967412 ಸಂಖ್ಯೆಯನ್ನು ಸಂಪರ್ಕಿಸಬಹುದು.





























