Thursday, October 22, 2026
Google search engine
Homeಕಾರ್ಕಳವಂದೇ ಮಾತರಂ ಏಕತೆ ಪ್ರತೀಕ, ಪೂರ್ಣ ಹಾಡಲು ಹಿಂಜರಿಕೆ ಬೇಡ: ಮೋಹನ್ ಭಾಗವತ್

ವಂದೇ ಮಾತರಂ ಏಕತೆ ಪ್ರತೀಕ, ಪೂರ್ಣ ಹಾಡಲು ಹಿಂಜರಿಕೆ ಬೇಡ: ಮೋಹನ್ ಭಾಗವತ್

ವಂದೇ ಮಾತರಂ ದೇಶದ ಏಕತೆ ಪ್ರತೀಕ. ಅದನ್ನು ಪೂರ್ಣ ಹಾಡಲು ಯಾವುದೇ ಹಿಂಜರಿಕೆ ಅಥವಾ ವಿರೋಧ ಇರಬಾರದು ಎಂದು ಆರ್‌ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. ನಾಗಪುರದಲ್ಲಿ ನಡೆದ ವಿಜಯದಶಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಂಗಾಳವನ್ನು ವಿಭಜಿಸುವ ಯತ್ನವನ್ನು ವಂದೇ ಮಾತರಂ ಸೋಲಿಸಿತ್ತು. ಇಂದಿಗೂ ಅದು ದೇಶದ ಏಕತೆಗೆ ಒಂದು ಸ್ಫೂರ್ತಿ. ಅದನ್ನು ಅತ್ಯಂತ ಹೆಮ್ಮೆಯಿಂದ, ಗಟ್ಟಿ ಧ್ವನಿಯಾಯಲ್ಲಿ ಹಾಡಲು ಹಿಂಜರಿಕೆ ಇರಬಾರದು ಎಂದು ಹೇಳಿದರು. ದೇಶದ ವಿಭಜನೆ ಬಗ್ಗೆ ಉಲ್ಲೇಖಿಸಿದ ಭಾಗವತ್‌, ಓಲೈಕೆ ಮನಃಸ್ಥಿತಿಯೇ ದೇಶದಲ್ಲಿ ವಿಭಜಿತ ಮನಃಸ್ಥಿತಿಯನ್ನು ಸೃಷ್ಟಿಸಿತು. ಅಂತಿಮವಾಗಿ ಇದು ದೇಶದ ವಿಭಜನೆಗೆ ಕಾರಣವಾಯಿತು ಎಂದು ಹೇಳಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments