Friday, October 23, 2026
Google search engine
Homeಕಾರ್ಕಳವಾಲಿಬಾಲ್‌ನಲ್ಲಿ ಕ್ರೈಸ್ಟ್ ಕಿಂಗ್ ಶಾಲಾ ವಿದ್ಯಾರ್ಥಿನಿಯರ ರಾಜ್ಯಮಟ್ಟದ ಸಾಧನೆ: ರಾಷ್ಟ್ರಮಟ್ಟಕ್ಕೆ ಆಯ್ಕೆ

ವಾಲಿಬಾಲ್‌ನಲ್ಲಿ ಕ್ರೈಸ್ಟ್ ಕಿಂಗ್ ಶಾಲಾ ವಿದ್ಯಾರ್ಥಿನಿಯರ ರಾಜ್ಯಮಟ್ಟದ ಸಾಧನೆ: ರಾಷ್ಟ್ರಮಟ್ಟಕ್ಕೆ ಆಯ್ಕೆ

ರಾಜ್ಯ ಶಿಕ್ಷಣ ಇಲಾಖೆ ನಡೆಸುವ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರು ಸಾಧನೆಯ ಹೊಸ ಮೈಲುಗಲ್ಲೊಂದನ್ನು ಸ್ಥಾಪಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ ಜಿಲ್ಲೆ ಇವರ ವತಿಯಿಂದ ಗಿಬ್ ಪ್ರೌಢಶಾಲೆ, ಕುಮಟಾ ಇಲ್ಲಿ ನಡೆದ ಪ್ರಾಥಮಿಕ ವಿಭಾಗದ 14ರ ವಯೋಮಿತಿಯ ರಾಜ್ಯ ಮಟ್ಟದ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ಆಂಗ್ಲಮಾಧ್ಯಮ ಪ್ರಾಥಮಿಕ ಶಾಲಾ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದುಕೊಂಡು ರಾಷ್ಟ್ರಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿವೆ. ತಂಡವನ್ನು ಏಳನೇ ತರಗತಿಯ ತ್ರಿಷ್ಮ, ಸೃಷ್ಟಿ ಎಸ್ ಪೂಜಾರಿ, ಕೇಟ್ಲಿನ್ ಏಂಜಲ್ ಪಿಂಟೊ, ಎಲ್ಸ ರುಬೇಲ್ ಡಿಸೋಜ, ಪ್ರನ್ವಿ ಎಸ್ ದೇವಾಡಿಗ ಹಾಗೂ ಆರನೇ ತರಗತಿಯ ನಿಶಾ ಡಿಸೋಜ, ಅಲಿಶಾ ಡಿಸೋಜ ಪ್ರತಿನಿಧಿಸಿದ್ದರು.

ಅಪೂರ್ವ ಸಾಧನೆಗೈದ ವಿದ್ಯಾರ್ಥಿನಿಯರನ್ನು ಸಂಸ್ಥೆಯ ಆಡಳಿತ ಮಂಡಳಿಯವರು, ಮುಖ್ಯಸ್ಥರು, ಶಿಕ್ಷಕರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭವನ್ನು ಅವಿಸ್ಮರಣೀಯಗೊಳಿಸಲು ಸಾಧಕ ವಿದ್ಯಾರ್ಥಿಗಳಿಗೆ ಅಕ್ಟೋಬರ್ 24ರಂದು ವಿಜಯೋತ್ಸವ ಮೆರವಣಿಗೆ ಹಾಗೂ ಕ್ರೀಡಾಭಿಮಾನಿಗಳು ಹಾಗೂ
ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಪ್ರಯುಕ್ತ ಕಾರ್ಕಳ ಅನಂತಶಯನ ವೃತ್ತದಿಂದ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯವರೆಗೆ ಅದ್ದೂರಿ ಮೆರವಣಿಗೆ ನಡೆಯಲಿದ್ದು ನಂತರ ಸಂಸ್ಥೆಯ ಸಭಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲು, ಕ್ರೀಡಾ ಕ್ಷೇತ್ರದ ಸಾಧಕರು, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ರೀಡಾ ಸಂಯೋಜನಾಧಿಕಾರಿಗಳು, ಕ್ರೈಸ್ಟ್ ಕಿಂಗ್ ಆಡಳಿತ ಮಂಡಳಿಯವರು ಭಾಗವಹಿಸಲಿದ್ದಾರೆ.

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments