Tuesday, October 27, 2026
Google search engine
Homeಕಾರ್ಕಳಗೆಳೆಯರ ಬಳಗ ಶಿರ್ಲಾಲು ವತಿಯಿಂದ ‘ಗೆಜ್ಜೆ’ ನಾಟಕ ಆಯೋಜನೆ: ₹53,326 ಸಹಾಯಧನ ಮತ್ತು ದೇಣಿಗೆ ವಿತರಣೆ

ಗೆಳೆಯರ ಬಳಗ ಶಿರ್ಲಾಲು ವತಿಯಿಂದ ‘ಗೆಜ್ಜೆ’ ನಾಟಕ ಆಯೋಜನೆ: ₹53,326 ಸಹಾಯಧನ ಮತ್ತು ದೇಣಿಗೆ ವಿತರಣೆ

ಗೆಳೆಯರ ಬಳಗ ಶಿರ್ಲಾಲು ವತಿಯಿಂದ ಅಕ್ಟೋಬರ್ 10, 2026ರಂದು ಶಿರ್ಲಾಲು ಭಜನಾ ಮಂಡಳಿಯ ವಠಾರದಲ್ಲಿ ಆಯೋಜಿಸಲಾಗಿದ್ದ ‘ಗೆಜ್ಜೆ’ ತುಳು ಹಾಸ್ಯಮಯ ನಾಟಕದ ಕಾರ್ಯಕ್ರಮದಲ್ಲಿ ಉಳಿತಾಯವಾದ ಒಟ್ಟು ₹53,326 ಮೊತ್ತವನ್ನು ವಿವಿಧ ಧಾರ್ಮಿಕ ಹಾಗೂ ಸೇವಾ ಸಂಸ್ಥೆಗಳಿಗೆ ವಿತರಿಸಲಾಯಿತು.

ಜಾತಿ-ಧರ್ಮದ ಭೇದವಿಲ್ಲದೆ ಊರಿನ ಹಾಗೂ ಪರವೂರಿನ ದಾನಿಗಳು ತನು, ಮನ, ಧನದಿಂದ ಸಹಕಾರ ನೀಡಿದ್ದರು. ಕಾರ್ಯಕ್ರಮದ ಖರ್ಚುಗಳನ್ನು ಹೊರತುಪಡಿಸಿ ಉಳಿದ ಮೊತ್ತವನ್ನು ಸಮಾಜಮುಖಿ ಕಾರ್ಯಗಳಿಗೆ ಹಂಚಿಕೆ ಮಾಡಲಾಯಿತು.

ದೇಣಿಗೆ ವಿತರಿಸಿದ ವಿವರ:

ಅಣ್ಣಪ್ಪ ಪಂಜುರ್ಲಿ ದೈವಸ್ಥಾನ, ಕುಂಟಲ್ ಕಟ್ಟೆ — ₹15,000

ಕಿನ್ನಿಗೋಳಿ ಕಟ್ಟೆ ದೊಂಪದ ಬಲಿ ಕೋಲ — ₹10,000

ಜನಾರ್ದನ ಆಚಾರ್ಯ, ಶಿವಬೆಟ್ಟು — ₹5,000

ಶ್ರೀ ಆಂಜನೇಯ ಭಜನಾ ಮಂಡಳಿ — ₹23,326

ಈ ಮೂಲಕ ಒಟ್ಟು ₹53,326 ಮೊತ್ತವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗೆಳೆಯರ ಬಳಗ ಶಿರ್ಲಾಲಿನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಊರಿನ ಹಾಗೂ ಪರವೂರಿನ ಸಮಸ್ತ ದಾನಿಗಳಿಗೆ ಗೆಳೆಯರ ಬಳಗದ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಲಾಯಿತು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments