ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ ಐಆರ್) ಬಳಿಕ ಕಾರ್ಕಳ ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯಲ್ಲಿ 1,85,181 ಮತದಾರರು ದಾಖಲಾಗಿದ್ದಾರೆ. ಅ.27ರಂದು ಪ್ರಕಟವಾದ ಅಂತಿಮ ಪಟ್ಟಿಯ ಪ್ರಕಾರ, ಎಸ್ಐಆರ್ ಪೂರ್ವಪಟ್ಟಿಗೆ ಹೋಲಿಸಿದರೆ 7,961 ಮತದಾರರ ನಿವ್ವಳ ಇಳಿಕೆಯಾಗಿದೆ.
ಎಸ್ಐಆರ್ ಪೂರ್ವಪಟ್ಟಿಯಲ್ಲಿ 1,93,142 ಮತದಾರರಿದ್ದರು. ಗಣತಿ ಹಂತದಲ್ಲಿ 9,657 ಹೆಸರುಗಳನ್ನು ತೆಗೆದುಹಾಕಲಾಗಿದ್ದು, ಕರಡು ಪಟ್ಟಿಯಲ್ಲಿ 1,83,485 ಮತದಾರರು ದಾಖಲಾಗಿದ್ದರು. ಕರಡು ಪಟ್ಟಿ ಪ್ರಕಟವಾದ ಬಳಿಕ 2,369 ಮತದಾರರ ಹೆಸರು ಸೇರ್ಪಡೆಯಾಗಿದ್ದು, 673 ಹೆಸರುಗಳನ್ನು ತೆಗೆದುಹಾಕಲಾಗಿದೆ. ಇದರಿಂದ ೧೬೯೬ ಮತದಾರರ ನಿವ್ವಳ ಹೆಚ್ಚಳವಾಗಿದ್ದು, ಅಂತಿಮ ಮತದಾರರ ಸಂಖ್ಯೆ 1,85,181ಕ್ಕೆ ತಲುಪಿದೆ.
ಗಣತಿ ಹಂತದಲ್ಲಿ ಮೃತಪಟ್ಟ 3,760 ಮಂದಿ, ಸ್ಥಳಾಂತರಗೊಂಡ 3,542 ಮಂದಿ, ನಕಲಿ ಅಥವಾ ದ್ವಿರುಕ್ತಿ ಹೆಸರುಗಳ ಅಡಿಯಲ್ಲಿ 2,014 ಮಂದಿ, ಲಭ್ಯವಿಲ್ಲದ 302 ಮಂದಿ ಹಾಗೂ ಇತರ ಕಾರಣಗಳಿಂದ 39 ಮಂದಿಯ ಹೆಸರುಗಳನ್ನು ತೆಗೆದುಹಾಕಲಾಗಿದೆ.
ಕರಡು ಪಟ್ಟಿಯ ಬಳಿಕ ಮರಣದ ಕಾರಣಕ್ಕೆ 14, ಸ್ಥಳಾಂತರದಿಂದ 509, ನಕಲಿ ಹೆಸರುಗಳ ಕಾರಣಕ್ಕೆ 3 ಹಾಗೂ ಅರ್ಹರಲ್ಲದ ಕಾರಣಕ್ಕೆ 147 ಹೆಸರುಗಳನ್ನು ತೆಗೆದುಹಾಕಲಾಗಿದೆ. ಈ ಅವಧಿಯಲ್ಲಿ ಹೊಸ ಮತದಾರರ ಸೇರ್ಪಡೆ ಹಾಗೂ ಇತರ ಬದಲಾವಣೆಗಳ ಮೂಲಕ ಒಟ್ಟು 2,369 ಹೆಸರುಗಳು ಸೇರ್ಪಡೆಯಾಗಿವೆ.






























