Thursday, October 29, 2026
Google search engine
Homeರಾಜ್ಯಸೌಜನ್ಯ ಕೇಸ್‌: ಎಸ್‌ಐಟಿ ಮುಖ್ಯಸ್ಥ ಸ್ಥಾನದಿಂದ ಕೈಬಿಡುವಂತೆ ಶಶಿಕುಮಾರ್ ಮನವಿ

ಸೌಜನ್ಯ ಕೇಸ್‌: ಎಸ್‌ಐಟಿ ಮುಖ್ಯಸ್ಥ ಸ್ಥಾನದಿಂದ ಕೈಬಿಡುವಂತೆ ಶಶಿಕುಮಾರ್ ಮನವಿ

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಶೇಷ ತನಿಖಾ ತಂಡದ ಮುಖ್ಯಸ್ಥ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಹಿರಿಯ ಐಪಿಎಸ್ ಅಧಿಕಾರಿ, ಐಜಿಪಿ ಶಶಿಕುಮಾರ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.

ಸೌಜನ್ಯ ಸಾವಿಗೆ ನ್ಯಾಯ ಕೋರಿ ಬೀದಿಗಿಳಿದಿರುವ ಸೌಜನ್ಯ ಪರ ಹೋರಾಟಗಾರರು ಹಾಗೂ ಕುಟುಂಬಸ್ಥರು ಎಸ್‌ಐಟಿ ನೇತೃತ್ವ ವಹಿಸಿರುವ ಐಜಿಪಿ ಶಶಿಕುಮಾರ್ ಅವರ ವಿರುದ್ಧ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದರು.

ಶಶಿಕುಮಾರ್ ಈ ಹಿಂದೆ ಮಂಗಳೂರು ಕಮಿಷನರ್ ಆಗಿ ಕೆಲಸ ಮಾಡಿದ್ದರು. ಈ ವೇಳೆ ಧರ್ಮಸ್ಥಳದ ಜೊತೆಗೆ ಶಶಿಕುಮಾರ್ ಅವರಿಗೆ ಸಾಕಷ್ಟು ಒಡನಾಟ ಇತ್ತು. ಈ ವಿಚಾರ ಇಟ್ಟುಕೊಂಡು ಸೌಜನ್ಯ ಪರ ಹೋರಾಟಗಾರರು ಶಶಿಕುಮಾರ್ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ತನಿಖೆಯಿಂದ ನ್ಯಾಯ ಸಿಗುವ ಬಗ್ಗೆ ಅಪಸ್ವರ ಎತ್ತಿದ್ದ ಹೋರಾಟಗಾರರು, ಅವರ ಕಾರ್ಯವೈಖರಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ಈ ವಿವಾದಗಳು ತನಿಖೆಯ ಪಾರದರ್ಶಕತೆಯ ಮೇಲೆ ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ, ಶಶಿಕುಮಾರ್ ಅವರೇ ಸ್ವಯಂಪ್ರೇರಿತರಾಗಿ ಪ್ರಕರಣದ ತನಿಖಾ ಹೊಣೆಯಿಂದ ತಮ್ಮನ್ನು ಕೈಬಿಡುವಂತೆ ಡಿಜಿಪಿಯವರಿಗೆ ವಿನಂತಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments