Wednesday, November 4, 2026
Google search engine
Homeಕಾರ್ಕಳನಿಟ್ಟೆ ಬಜಕಳ ಹಾರು ಬೂದಿ ಘಟಕದ ವಿರುದ್ದ ಪ್ರತಿಭಟನೆ

ನಿಟ್ಟೆ ಬಜಕಳ ಹಾರು ಬೂದಿ ಘಟಕದ ವಿರುದ್ದ ಪ್ರತಿಭಟನೆ

ನಿಟ್ಟೆ ಬಜಕಳದಲ್ಲಿ ಆರಂಭಗೊಳ್ಳಲಿರುವ ರಾಸಾಯನಿಕ ಕಾರ್ಖಾನೆಯ ವಿರುದ್ದ ಸ್ಥಳೀಯ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆಯು ನಿಟ್ಟೆ ಗ್ರಾ.ಪಂ.ನ ಮುಂಭಾಗದಲ್ಲಿ ಮಂಗಳವಾರ ನಡೆಯಿತು.

ನಿವೃತ್ತ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ರಾಸಾಯನಿಕ ಕಾರ್ಖಾನೆಯ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮದಡಿ ಪಡೆದ ದಾಖಲೆಯಂತೆ ಗ್ರಾ.ಪಂ. ಅಧಿಕಾರಿಗಳ ಎಡವಟ್ಟು ಎದ್ದು ಕಾಣುತ್ತಿದೆ. ಪರಿಸರ ಇಲಾಖೆಯು ಕಾರ್ಖಾನೆಯ ಸುತ್ತಮುತ್ತಲಿನ ವಾಸ್ತವ್ಯದ ಮನೆಗಳು, ಕುಡಿಯುವ ನೀರಿನ ಬಾವಿ ಮತ್ತು ಬೋರ್‌ವೆಲ್‌ಗಳನ್ನು ಗಮನದಲ್ಲಿಟ್ಟುಕೊಳ್ಳದೆ ಆರಂಭಿಕ ಪ್ರಮಾಣಪತ್ರ ನೀಡಿದೆ. ಗ್ರಾ.ಪಂ.ನಿಂದ ಕಳೆದ ಏಪ್ರಿಲ್ ತಿಂಗಳಲ್ಲಿ ಕಟ್ಟಡ ಪರವಾನಿಗೆ ನೀಡಿದ್ದು, ಈ ಸಂದರ್ಭ ಆ ಕಟ್ಟಡದಲ್ಲಿ ಉತ್ಪಾದನೆ ನಡೆಸಲು ಬಳಸುವ ಕಚ್ಛಾವಸ್ತುಗಳ ಬಗ್ಗೆ ಪರಿಶೀಲನೆ ನಡೆಸಿಲ್ಲ. ದೂರದ ಪಡುಬಿದ್ರೆ ಬಳಿಯಿಂದ ಹಾರುಬೂದಿಯನ್ನು ನಿಟ್ಟೆ ಬಜಕಳಕ್ಕೆ ತಂದು, ಇಟ್ಟಿಗೆ ತಯಾರಿಸಲು ಮುಂದಾದ ಕಾರ್ಖಾನೆಯು ವಿಷಕಾರಿ ಅನಿಲ ಬಿಡುಗಡೆ ಮಾಡುವುದರಿಂದ ಪರಿಸರಕ್ಕೆ ಹಾನಿಯೊಡ್ಡುವ ಪ್ರಯತ್ನಕ್ಕೆ ಕೈ ಹಾಕಿರುವುದು ಅತ್ಯಂತ ಆತಂಕಕಾರಿ ವಿಚಾರ ಎಂದರು. ಅಂತರ್ಜಲ, ಅರಣ್ಯ, ಕೃಷಿ ಮತ್ತು ಜನತೆಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಈ ಹಾರುಬೂದಿ ಘಟಕ ಸ್ಥಾಪನೆಗೆ ನಾವೆಲ್ಲರೂ ಸಮ್ಮತಿಸಬಾರದು. ಇದಕ್ಕೆ ಕಾರಣೀಕರ್ತರಾದ ಅಧಿಕಾರಿಗಳ ವಿರುದ್ಧ ದಾವೆ ಹೂಡಬೇಕು. ಹಾಗೂ ಕಾರ್ಖಾನೆಯ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು. ನಿಟ್ಟೆಗುತ್ತು ಜಯರಾಜ ಶೆಟ್ಟಿ ಮಾತನಾಡಿ, ಆರಂಭಿಕ ದಿನಗಳಲ್ಲಿ ಗ್ರಾ.ಪಂ. ಈ ಬಗ್ಗೆ ದಾಖಲೆಗಳನ್ನು ನೀಡುವಲ್ಲಿ ಸತಾಯಿಸಿದೆ. ಇದೀಗ ಎಲ್ಲಾ ದಾಖಲೆಗಳನ್ನು ಪಡೆಯಲಾಗಿದ್ದು, ಮುಂದಿನ ಕಾನೂನು ಹೋರಾಟಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದರು.

ಜಿ.ಪಂ.ಮಾಜಿ ಸದಸ್ಯ ಕೆದಿಂಜೆ ಸುಪ್ರೀತ್ ಶೆಟ್ಟಿ ಮಾತನಾಡಿ, ನಿಟ್ಟೆ ಗ್ರಾಮಕ್ಕೆ ಇಂತಹ ಕಾರ್ಖಾನೆಗಳ ಅಗತ್ಯವಿಲ್ಲ. ನಮಗೆ ಜನರ ಹಿತ ಮುಖ್ಯ ಎಂದರು. ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಸುಭಾಶ್ಚಂದ್ರ ಹೆಗ್ಡೆ ಮಾತನಾಡಿ, ಕಳೆದ ಗ್ರಾಮಸಭೆಯಲ್ಲಿ ಈ ಕಾರ್ಖಾನೆಯ ಬಗ್ಗೆ ಮಾಹಿತಿಯನ್ನು ನಾವು ಕೇಳಿದ್ದೇವು. ಆದರೆ ಪಿಡಿಓ ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದರು. ಬಳಿಕದ ದಿನಗಳಲ್ಲಿ ಈ ಕಾರ್ಖಾನೆಯ ಬಗ್ಗೆ ಎಲ್ಲಾ ಮಾಹಿತಿಗಳು ಹೊರಬಿದ್ದಿವೆ. ಈ ಬಗ್ಗೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಪ್ರಕಾಶ್ ಆಚಾರ್ಯ ಕುಂಟಾಡಿ ಮಾತನಾಡಿ, ಪರಿಸರಕ್ಕೆ ಹಾನಿಕರವಾದ ಈ ಉದ್ಯಮಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದರು.

ಪ್ರತಿಭಟನೆಯಲ್ಲಿ ಮಾಜಿ ಸದಸ್ಯರುಗಳಾದ ದಯಾನಂದ ಶೆಟ್ಟಿ, ದಿವಾಕರ ಶೆಟ್ಟಿ, ಮನ್ಮಥ ಕುಮಾರ್ ಶೆಟ್ಟಿ, ಸಂತೋಷ್, ಸುರೇಶ್ ಶೆಟ್ಟಿ, ಸಂತೋಷ್ ಶೆಟ್ಟಿ, ಪ್ರವೀಣ್ ಕೋಟ್ಯಾನ್, ಆನಂದ ಜೋಸೆಫ್, ಗ್ರಾಮಸ್ಥರುಗಳಾದ ಸುಧಾಕರ ಶೆಟ್ಟಿ, ವಿಠಲ ಹೆಗ್ಡೆ, ದೇವದಾಸ ಹೆಗ್ಡೆ, ನಿತಿನ್ ಜೈನ್, ಕರುಣಾಕರ ಶೆಟ್ಟಿ, ಮಂಜುನಾಥ ಶೆಟ್ಟಿ, ಸುಭಾಸ್ ಶೆಟ್ಟಿ, ಶಶಿಧರ ದೇವಾಡಿಗ, ನಿತ್ಯಾನಂದ ಶೆಟ್ಟಿ, ದಿವಾಕರ ಶೆಟ್ಟಿ, ಶ್ರೀನಿವಾಸ ಸಾಲ್ಯಾನ್, ಸಚಿನ್ ಹೆಗ್ಡೆ, ಉಮೇಶ್ ಕುಂಟಾಡಿ, ಜಗದೀಶ್ ಹೆಗ್ಡೆ, ವಿಶ್ವನಾಥ ಹೆಗ್ಡೆ, ದಿನೇಶ್ ಶೆಟ್ಟಿ, ವಿಶ್ವನಾಥ ಅಮೀನ್, ಸುದೀಪ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ವಿಶ್ವನಾಥ ಅಮೀನ್, ನಾರಾಯಣ ಅಮೀನ್, ಗಣಪತಿ ನಾಯಕ್,ವಿನೋದ್ ಶೆಟ್ಟಿ , ರಾಜೇಂದ್ರ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು. ವಿಲಾಸ್ ಕುಮಾರ್ ನಿಟ್ಟೆ ನಿರೂಪಿಸಿದರು. ಬಳಿಕ ಗ್ರಾ.ಪಂ, ಶಾಸಕರ ಕಛೇರಿಗೆ ಹಾಗೂ ತಾಲೂಕು ಕಛೇರಿಗೆ ಮನವಿ ಸಲ್ಲಿಸಲಾಯಿತು.

 

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments