Friday, November 27, 2026
Google search engine
Homeಕಾರ್ಕಳಹೆಬ್ರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಎಸ್.ಆರ್. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಹೆಬ್ರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಎಸ್.ಆರ್. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಹೆಬ್ರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಎಸ್.ಆರ್. ಪದವಿ ಪೂರ್ವ ಕಾಲೇಜು, ಹೆಬ್ರಿಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳು ಕಾರ್ಕಳ ವಲಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಶಾಲಾ ಶಿಕ್ಷಣ ಇಲಾಖೆ ಹಾಗೂ ಹೆರ್ಗ ವಿಠಲ ಶೆಟ್ಟಿ ಪ್ರೌಢಶಾಲೆ ಕುಚ್ಚೂರು ಆಶ್ರಯದಲ್ಲಿ ಆಯೋಜಿಸಲಾದ ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಹಲವು ಬಹುಮಾನಗಳನ್ನು ಪಡೆದುಕೊಂಡರು.

ವಿಜೇತ ವಿದ್ಯಾರ್ಥಿಗಳ ವಿವರ:

1. ಕನ್ನಡ ಚರ್ಚಾ ಸ್ಪರ್ಧೆ – ಐಶ್ವರ್ಯ ಶೆಟ್ಟಿ (ಪ್ರಥಮ)
2. ಚಿತ್ರಕಲೆ ಸ್ಪರ್ಧೆ – ಪರೀಕ್ಷಿತ್ ಆಚಾರ್ಯ (ಪ್ರಥಮ)
3. ಗಝಲ್ – ಪಾರ್ಥ ಆರ್. ಬೆಳಗೋಳ (ಪ್ರಥಮ)
4. ಧಾರ್ಮಿಕ ಪಠಣ (ಅರೇಬಿಕ್) – ಸುಮೈರ್ ನವಾಜ್ (ಪ್ರಥಮ)
5. ಹಿಂದಿ ಭಾಷಣ – ಸುವರ್ಣ ಕೆ. ಶೆಟ್ಟಿ (ಪ್ರಥಮ)
6. ಇಂಗ್ಲಿಷ್ ಭಾಷಣ – ಅಕ್ಷಯ್ ಭಟ್ (ದ್ವಿತೀಯ)
7. ಕನ್ನಡ ಭಾಷಣ – ಸ್ವರ್ಣಿಕಾ ಎಸ್. ಶೆಟ್ಟಿ (ದ್ವಿತೀಯ)
8. ಭಾವಗೀತೆ – ಚಿರಂತನ್ ಐತಾಳ್ (ದ್ವಿತೀಯ)
9. ಕಾವ್ವಾಲಿ – ಪಾರ್ಥ ಆರ್. ಬೆಳಗೋಳ, ಸುಮೈರ್ ನವಾಜ್, ಗಿಲ್ಬರ್ಟ್ ಜಸ್ಟಿನ್, ಸೃಜನ್ ಹಾಗೂ ಆರುಷ್ (ದ್ವಿತೀಯ)
10. ಜನಪದ ಗೀತೆ – ಪಾರ್ಥ ಆರ್. ಬೆಳಗೋಳ (ತೃತೀಯ)
ವಿದ್ಯಾರ್ಥಿಗಳನ್ನು ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್.ನಾಗರಾಜ್ ಶೆಟ್ಟಿ ಹಾಗೂ ಕಾಯದರ್ಶಿಯವರಾದ ಸಪ್ನಾ ಎನ್ ಶೆಟ್ಟಿ ಅಭಿನಂದಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments