
ಉಡುಪಿ : ಬಿಜೆಪಿ ಜಿಲ್ಲಾದ್ಯಕ್ಷರಾಗಿ ಕುತ್ಯಾರು ನವೀನ್ ಶೆಟ್ಟಿ ನೇಮಕ
ಜಿಲ್ಲಾ ಬಿಜೆಪಿ ಅಧ್ಯಕ್ಷರನ್ನಾಗಿ ಕುತ್ಯಾರು ನವೀನ್ ಶೆಟ್ಟಿ ಅವರನ್ನು ನೇಮಿಸಿ ರಾಜ್ಯ ಬಿಜೆಪಿ ಘೋಷಿಸಿದೆ.
ಕಳೆದ ಒಂದೂವರೆ ವರ್ಷದಿಂದ ಕಿಶೋರ್ ಕುಮಾರ್ ಕುಂದಾಪುರ ಅವರು ಜಿಲ್ಲಾಧ್ಯಕ್ಷರಾಗಿದ್ದರು. ಕುತ್ಯಾರು ನವೀನ್ ಶೆಟ್ಟಿ ಅವರು 1999ರಲ್ಲಿ ಕುತ್ಯಾರು ಗ್ರಾ.ಪಂ.ನ ಬಿಜೆಪಿ ಬೆಂಬಲಿತ ಸದಸ್ಯರಾಗಿ, ಅಧ್ಯಕ್ಷರಾಗಿ ಅನಂತರ ಬಿಜೆಪಿ ಕಾಪು ಮಂಡಲ ಯುವಮೋರ್ಚಾ ಅಧ್ಯಕ್ಷರಾಗಿ, ಮಂಡಲಾಧ್ಯಕ್ಷರಾಗಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಮೂರು ಅವಧಿಗೆ ಸೇವೆ ಸಲ್ಲಿಸಿದ್ದಾರೆ. ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಪಕ್ಷ ಸೂಚಿಸಿದ ಜವಾಬ್ದಾರಿ ನಿಭಾಯಿಸಿರುವ ಜತೆಗೆ ಪಕ್ಷದ ವಿವಿಧ ಅಭಿಯಾನಗಳಲ್ಲೂ ಸಕ್ರಿಯರಾಗಿದ್ದರು.












