ಹುಟ್ಟುಹಬ್ಬ ಪಾರ್ಟಿಯಲ್ಲಿ ಮಾದಕ ವಸ್ತು ಪತ್ತೆ: ಗಾಯಕಿ ಮಂಗ್ಲಿ ವಿರುದ್ಧ ಪ್ರಕರಣ
ಖ್ಯಾತ ಗಾಯಕಿ ಮಂಗ್ಲಿ (ಸತ್ಯವತಿ ರಾಥೋಡ್) ಅವರು ಮಂಗಳವಾರ ಆಯೋಜಿಸಿದ್ದ ಹುಟ್ಟುಹಬ್ಬದ ಪಾರ್ಟಿ ಮೇಲೆ ಪೊಲಿಸರು ದಾಳಿ ಮಾಡಿದ್ದು, ಸ್ಥಳದಿಂದ ಮಾದಕ ವಸ್ತುಗಳು ಹಾಗೂ ವಿದೇಶಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಹೈದರಾಬಾದ್ ಹೊರವಲಯದಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಸುಮಾರು 50 ಮಂದಿ ಭಾಗಿಯಾಗಿದ್ದು, ಈ ಪೈಕಿ 9 ಮಂದಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಮಾದಕ ದ್ರವ್ಯ ಸೇವನೆ, ಅನುಮತಿಯಿಲ್ಲದೆ ಪಾರ್ಟಿ ಆಯೋಜನೆ, ಡಿಜೆ ಬಳಕೆ ಹಾಗೂ ವಿದೇಶಿ ಮದ್ಯ ಸಂಗ್ರಹ ಆರೋಪದಲ್ಲಿ ಮುಸ್ಲಿ ವಿರುದ್ಧ ಪ್ರಕರಣ ದಾಖಲಾಗಿದೆ.


























