ಸುನಿಲ್ ಕುಮಾರ್ ಆಪ್ತನಿಂದಲೇ ವಿದ್ಯಾರ್ಥಿನಿಗೆ ಕಿರುಕುಳ:ಹಿಂದೂ ಹೆಣ್ಣು ಮಕ್ಕಳಿಗೆ ಬಿಜೆಪಿಗರಿಂದ ರಕ್ಷಣೆ ಬೇಕಿದೆ-ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಜೋಗಿ

0

ಸುನಿಲ್ ಕುಮಾರ್ ಆಪ್ತನಿಂದಲೇ ವಿದ್ಯಾರ್ಥಿನಿಗೆ ಕಿರುಕುಳ:ಹಿಂದೂ ಹೆಣ್ಣು ಮಕ್ಕಳಿಗೆ ಬಿಜೆಪಿಗರಿಂದ ರಕ್ಷಣೆ ಬೇಕಿದೆ-ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಜೋಗಿ

ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ಸುನಿಲ್ ಕುಮಾರ್ ರವರ ಆಪ್ತ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಹಾಗೂ ಮಾಜಿ ಕಾರ್ಕಳ ಯುವ ಮೋರ್ಚಾ ಅಧ್ಯಕ್ಷ ಆಗಿರುವ ಈ ಕಾಮುಕ ಅಧ್ಯಾಪಕನಾಗಿ ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಉನ್ನತ ಮಟ್ಟಕ್ಕೇರುವ ಪಾಠ ಮಾಡಬೇಕಿರುವ ಈತ ವಿದ್ಯಾರ್ಥಿನಿಯರನ್ನು ತನ್ನ ಕಾಮತೃಷೆಗೆ ಬಳಸಲು ಪ್ರಯತ್ನಿಸಿ ಸಮಾಜ ಘಾತುಕ ಎನಿಸಿಕೊಂಡಿದ್ದಾನೆ. ಇವನ ಈ ವರ್ತನೆಯಿಂದ ಕಾರ್ಕಳದ ಇಡೀ ಅಧ್ಯಾಪಕ ವೃಂದವೇ ಮುಜುಗರ ಪಡುವಂತಾಗಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಜೋಗಿ ಹೇಳಿದ್ದಾರೆ.

ಪೋಷಕರು ಮಕ್ಕಳನ್ನು ಕಾಲೇಜಿಗೆ ವಿದ್ಯಾಭ್ಯಾಸಕ್ಕೆ ಶಿಕ್ಷಣ ಸಂಸ್ಥೆಯ ನಂಬಿಕೆಯಿಂದ ಕಳುಹಿಸುತ್ತಿರುವಾಗ ಈತನ ದುರ್ನಡತೆ ಪೋಷಕರನ್ನು ಗಾಬರಿಪಡಿಸುವಂತೆ ಮಾಡಿದೆ. ಈ ಹಿಂದೆ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಇದೆ ರೀತಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಕೆಲಸ ಕಳೆದುಕೊಂಡಿದ್ದ ಈತನಿಗೆ ಬಿಜೆಪಿಯ ಪ್ರಬಲ ವ್ಯಕ್ತಿಗಳು ಹೆಬ್ರಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಕೆಲಸ ಕಲ್ಪಿಸಿಕೊಟ್ಟಿದ್ದಾರೆ. ಹುಟ್ಟು ಬುದ್ದಿ ಸುಟ್ಟರೂ ಹೋಗದು ಎಂಬಂತೆ ಈತ ಮತ್ತೆ ತನ್ನ ಹಳೆ ಚಾಳಿ ಶುರು ಮಾಡಿ ವಿದ್ಯಾರ್ಥಿನಿಯನ್ನು ತನ್ನ ಕಾರು ಹತ್ತುವಂತೆ ಪೀಡಿಸುವ, ಅಸಭ್ಯ ಮಾತುಗಳನ್ನಾಡುವ ಆಡಿಯೋ ಒಂದು ವೈರಲ್ ಆಗುತ್ತಿದೆ. ಆದರೂ ಈ ಪರಮ ಸ್ತ್ರೀ ಪೀಡಕನ ಬಗ್ಗೆ ಶಾಸಕರು ಕ್ರಮ ಕೈಗೊಳ್ಳದಿರುವುದು ಶಾಸಕರಿಗೆ ಮತ ಹಾಕಿದ ಕಾರ್ಕಳ ಜನತೆ ತಲೆ ತಗ್ಗಿಸುವಂತೆ ಮಾಡಿದೆ.

ಮೈಕ್ ಸಿಕ್ಕ ತಕ್ಷಣ ದೇಶಪ್ರೇಮ, ಧರ್ಮ ರಕ್ಷಣೆ, ಮಹಿಳೆಯರ ರಕ್ಷಣೆ ಬಗ್ಗೆ ಭಾಷಣ ಬಿಗಿಯುವ ಬಿಜೆಪಿಯವರು ತಮ್ಮ ಪಕ್ಷದಲ್ಲಿ ಇಂತಹ ಕೃತ್ಯವೆಸಗುವವರ ಬಗ್ಗೆ ಏಕೆ ಮೌನವಾಗಿದೆ ತಿಳಿಯುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದೇನೆ.

ಈ ಘಟನೆ ನಡೆದ ಆಡಿಯೋ ಊರಿಂದ ಊರಿಗೆ ವೈರಲ್ ಆಗುತ್ತಿದ್ದು, ಇಷ್ಟಾದರೂ ಶಾಸಕ ಸುನಿಲ್ ಕುಮಾರ್ ಆಗಲಿ, ಜಿಲ್ಲಾ ಬಿಜೆಪಿ ಮುಖಂಡರಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ.

ಇಂತಹ ಕಾಮುಕರಿಂದ ಸಮಾಜ ಕೆಡುವುದನ್ನು ತಪ್ಪಿಸಲು ಪೊಲೀಸರು ಈತನ ಮೇಲೆ ಸ್ವಯಂ ಪ್ರೇರಿತ ಕೇಸ್ ದಾಖಲಿಸಿ ಇಂತವರ ಮೇಲೆ ಉಗ್ರ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿಸುತ್ತೇನೆ.

   

LEAVE A REPLY

Please enter your comment!
Please enter your name here