ಬ್ಲಾಕ್ ಕಾಂಗ್ರೆಸ್ ಕಾರ್ಕಳ:ಪಕ್ಷ ಸಂಘಟನೆಯ ಪ್ರಯುಕ್ತ ವಿವಿಧ ಘಟಕಗಳ ಅಧ್ಯಕ್ಷರು, ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಹಾಗೂ ವಲಯ ಉಸ್ತುವಾರಿಗಳ ಸಭೆ

0

ಬ್ಲಾಕ್ ಕಾಂಗ್ರೆಸ್ ಕಾರ್ಕಳ ಆಶ್ರಯದಲ್ಲಿ ಪಕ್ಷ ಸಂಘಟನೆಯ ಪ್ರಯುಕ್ತ ವಿವಿಧ ಘಟಕಗಳ ಅಧ್ಯಕ್ಷರು, ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಹಾಗೂ ವಲಯ ಉಸ್ತುವಾರಿಗಳ ಸಭೆಯು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದರಾವ್ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಮಾತನಾಡಿ ಗ್ರಾಮೀಣ ಮತ್ತು ಬೂತ್ ಮಟ್ಟದಲ್ಲಿ ಸಮಿತಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಿದರೆ ಚುನಾವಣೆಯಲ್ಲಿ ಉತ್ತಮ‌ ಫಲಿತಾಂಶ ಪಡೆಯಲು ಸಾದ್ಯ ಅದ್ದರಿಂದ ಸ್ಥಳೀಯ ನಾಯಕರು ತಮ್ಮನ್ನು ಸಂಪೂರ್ಣವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಪೂರ್ಣ ಪ್ರಮಾಣದ ಸಮಿತಿಯನ್ನು ರಚಿಸುವಲ್ಲಿ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಅದ್ಯಕ್ಷ ಅಜಿತ್ ಹೆಗ್ಡೆ ಮಾತನಾಡಿ ಅರ್ಜಿ ಸಲ್ಲಿಸಿದ ಶೇಖಡಾ 95 ಜನರಿಗೆ ಗ್ಯಾರಂಟಿ ಯೋಜನೆಯು ಸರಿಯಾಗಿ ತಲುಪುತ್ತಿದ ಇತರರಿಗೆ ಅವರ ವೈಯಕ್ತಿಕ ಸಮಸ್ಯೆಗಳಿಂದ ಸಾದ್ಯವಾಗುತ್ತಿಲ್ಲ ಗ್ಯಾರಂಟಿ ಅಧಾಲತ್ ಮೂಲಕ ಅವರಿಗೂ ಯೋಜನೆಗಳನ್ನು ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಗ್ರಾಮೀಣ ಮತ್ತು ಬೂತ್ ಸಮಿತಿಗಳ ಪುನಾರಚನೆ, ಗ್ರಾಮ ಮಟ್ಟದಲ್ಲಿ ಗ್ಯಾರಂಟಿ ಸಮಾವೇಶ, ಮತ್ತು ವಲಯವಾರು ವಿವಿದ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.

ವಿವಿಧ ಘಟಕದ ಅದ್ಯಕ್ಷರುಗಳಾದ ರೆಹಮ್ಮತುಲ್ಲಾ, ಸಂತೋಷ್ ದೇವಾಡಿಗ, ಅನಿಲ್ ಪೂಜಾರಿ, ಸುದರ್ಶನ್ ಬಂಗೇರ, ಅಣ್ಣಪ್ಪ ನಕ್ರೆ, ಕುಶ ಮೂಲ್ಯ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವಲಯವಾರು ಉಸ್ತುವಾರಿಗಳಾಗಿ ಸುಧಾಕರ್ ಶೆಟ್ಟಿ, ಸುಬಿತ್ N.R ,ವಿವೇಕ್ ಶೆಣೈ, ಕುಶ ಮೂಲ್ಯ, ಅನಿಲ್ ಪೂಜಾರಿ, ನಾಗೇಶ್ ಭಂಡಾರಿ, ಉದಯ್ ಶೆಟ್ಟಿ, ತಾರಾನಾಥ್ ಕೋಟ್ಯಾನ್, ಕೆದಿಂಜೆ ಸುಪ್ರೀತ್ ಇವರುಗಳಿಗೆ ಜವಾಬ್ದಾರಿಗಳನ್ನು ವಹಿಸಿಕೊಡಲಾಯಿತು.

ಈ ಸಂದರ್ಬದಲ್ಲಿ ಗುಜರಾತಿನ ಅಹಮದಾಬಾದ್ ವಿಮಾನ ದುರಂತದಲ್ಲಿ ಮಡಿದವರಿಗೆ ಮೌನ ಪ್ರಾರ್ಥನೆ ಮತ್ತು ಕ್ಯಾಂಡಲ್ ಬೆಳಗಿ ಶೃದ್ದಾಂಜಲಿ ಸಲ್ಲಿಸಲಾಯಿತು.

ವೇದಿಕೆಯಲ್ಲಿ ರಾಜ್ಯ ರೈತ ಸಂಘದ ಕಾರ್ಯದರ್ಶಿ ಉದಯ್ ಶೆಟ್ಟಿ ಕುಕ್ಕುಂದೂರು, ಹಿರ್ಗಾನ ಸೊಸೈಟಿ ಅದ್ಯಕ್ಷ ಸಿರಿಯಣ್ಣ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾ ಅದ್ಯಕ್ಷ ಕೃಷ್ಣ ಶೆಟ್ಟಿ, ಉಪಸ್ಥಿತರಿದ್ದರು.ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ನಿರೂಪಿಸಿ, ಮಲ್ಲಿಕ್ ಅತ್ತೂರ ಸ್ವಾಗತಿಸಿದರು, ಕೃಷ್ಣ ಶೆಟ್ಟಿ ವಂದಿಸಿದರು.

 

   

LEAVE A REPLY

Please enter your comment!
Please enter your name here