
ಅಜೆಕಾರು ಚರ್ಚ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿಯಾಗಿ ರೇಷ್ಮಾ ಶೀಲಾ ರೋಡ್ರಿಗಾಸ್ ಆಯ್ಕೆ.
ಅಜೆಕಾರು:ಇಲ್ಲಿನ ಸುಮಾರು 20 ವರುಷಗಳ ಹಿಂದೆ ಆರಂಭಗೊಂಡ ಚರ್ಚ್ ಆಂಗ್ಲ ಮಾಧ್ಯಮ ಶಾಲೆಗೆ ನೂತನ ಮುಖ್ಯ ಶಿಕ್ಷಕಿಯಾಗಿರೇಷ್ಮಾ ಶೀಲಾ ರೋಡ್ರಿಗಸ್ ಆಯ್ಕೆ ಯಾಗಿದ್ದಾರೆ.
ಉಡುಪಿ ಧರ್ಮ ಪ್ರಾಂತ್ಯದ ಧರ್ಮಧ್ಯಕ್ಷರಾದ ಜೆರಾಲ್ಡ್ ಐಸಾಕ್ ಲೋಬೊರವರ ಸೂಚನೆಯ ಮೇರೆಗೆ ಉಡುಪಿ ಕ್ಯಾಥೊಲಿಕ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ವಿನಂಸೆಂಟ್ ಕ್ರ್ಯಾಸ್ಟರವರು ಆಯ್ಕೆ ಪ್ರಕ್ರಿಯೆ ಯನ್ನು ನಡೆಸಿದರು.
ರೇಷ್ಮಾರವರು ಕಳೆದ 17 ವರುಷಗಳಿಂದ ಅಜೆಕಾರು ಚರ್ಚ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಈ ಸಂದರ್ಭದಲ್ಲಿ ಶಾಲೆಯ ನೂತನ ಸಂಚಾಲಕರಾದ ಹೆನ್ರಿ ಮಸ್ಕರೇನ್ಹಸ್ ಉಪಸ್ಥಿತರಿದ್ದರು.ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಸ್ಟೇಪನ್ ಲೋಬೊ ಹಾಗೂ ಎಲ್ಲ ಶಿಕ್ಷಕರು,ಶಿಕ್ಷಕೇತರ ಶಿಬಂದಿಗಳು ಸಹಕರಿಸಿದರು.












