ಕಾರ್ಕಳ:ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ-ಎರಡು ಪ್ರತ್ಯೇಕ ದೂರು ದಾಖಲು

0

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ- ಬಿಜೆಪಿ ಯುವ ಮೋರ್ಚ ಮುಖಂಡ ಸುಹಾಸ್ ಶೆಟ್ಟಿ ಮುಟ್ಲುಪಾಡಿ ವಿರುದ್ದ ಸಹಾಯಕ ಪೋಲೀಸ್ ಅಧೀಕ್ಷಕರಿಗೆ ಪ್ರತೇಕ ದೂರು ದಾಖಲಿಸಿದ ಮಹಿಳಾ ಕಾಂಗ್ರೆಸ್ ಮತ್ತು ವಿದ್ಯಾರ್ಥಿ ಕಾಂಗ್ರೆಸ್

ಬಿಜೆಪಿ ಯುವ‌ ಮೋರ್ಚ ಮುಖಂಡ ಶಿಕ್ಷಕ ಸುಹಾಸ್ ಶೆಟ್ಟಿ ‌ಮುಟ್ಲುಪಾಡಿ ತನ್ನ ಕಾಲೇಜಿನ ವಿದ್ಯಾರ್ಥಿಗೆ ಪೋನ್ ಮೂಲಕ ಲೈಂಗಿಕ ಕಿರುಕುಳ ನೀಡುವ ಆಡೀಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮಹಿಳಾ ಕಾಂಗ್ರೆಸ್ ಮತ್ತು ಎನ್. ಎಸ್. ಯು.ಐ. ವಿದ್ಯಾರ್ಥಿ ಸಂಘಟನೆಯು ಪ್ರತೇಕವಾಗಿ ಉಪ ಪೋಲೀಸ್ ಅಧೀಕ್ಷಕರಿಗೆ ದೂರು ನೀಡಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿರುವ ಆಡಿಯೋದಲ್ಲಿ ಸುಹಾಸ್ ಶೆಟ್ಟಿಯು ಅಪ್ರಾಪ್ತ ವಿದ್ಯಾರ್ಥಿನಿಗೆ ತನ್ನ ಜೊತೆ ಬರುವಂತೆ ಬಲವಂತವಾಗಿ ಒತ್ತಾಯಿಸುತ್ತಿದ್ದಾರೆ, ಈ ಹಿಂದೆಯು ಒಂದು ಕಾಲೇಜಿನಲ್ಲಿ ತನ್ನ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಪರಿಣಾಮ ಕಾಲೇಜು ಮಂಡಲಿ ಕೆಲಸದಿಂದ ವಜಾ ಮಾಡಿತ್ತು, ವಿದ್ಯಾರ್ಥಿಗಳು ಭಯದಿಂದ ದೂರು ನೀಡಲು ಹಿಂದೇಟು ಹಾಕುವ ಕಾರಕ್ಕಾಗಿ ಇವರು ಮತ್ತೆ ಮತ್ತೆ ಈ ವರ್ತನೆಯನ್ನು ಪುನರಾವರ್ತಿಸುತ್ತಾರೆ, ಅವರನ್ನು ತಕ್ಷಣ ಬಂದಿಸಿ ಮೊಬೈಲ್ ವಶಕ್ಕೆ ಪಡೆದರೆ ಇವರ ಕಿರುಕುಳಕ್ಕೆ ಬಲಿಯಾದವರ ಎಲ್ಲಾ ಮಾಹಿತಿ ಸಿಗುವ ಸಾದ್ಯತೆ ಇದೆ ಈ ಬಗ್ಗೆ ಪೋಲೀಸ್ ಇಲಾಖೆ ಸುಮೋಟೊ ಕೇಸು ದಾಖಲಿಸಿ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಈ ಸಂದರ್ಬದಲ್ಲಿ ಮಹಿಳಾ ಕಾಂಗ್ರೇಸ್ ಅದ್ಯಕ್ಷೆ ಭಾನು ಭಾಸ್ಕರ್ ಪೂಜಾರಿ, ರೀನಾ ಜೂಲಿಯೆಟ್, ಪುರಸಭಾ ಸದಸ್ಯೆ ಪ್ರತಿಮಾ ರಾಣೆ, ಪ್ರಭಾ ಕಿಶೋರ್, ರೆಹಮತ್, ಸುನೀತಾ ಶೆಟ್ಟಿ, ಆಶಾ ಬೈಲೂರು, ಶೋಬಾ ಪ್ರಸಾದ್, ಶೋಬಾ ರಾಣೆ, ರಾಜೇಶ್ವರಿ ಸಾಣೂರು, ಚರಿತ್ರಾ. ಎನ್.ಎಸ್.ಯು.ಐ. ಸಂಘಟನೆಯ ಅದ್ಯಕ್ಷರಾದ ಗುರುದೀಪ್ ನಿಟ್ಟೆ, ಉದಿತ್ ಶೆಟ್ಟಿಗಾರ್, ಪಧಾದಿಕಾರಿಗಳಾದ ಸಂಸ್ಕೃತ್ ಎನ್. ಆರ್, ಈವನ್ಸ್, ನಿತೀಶ್, ಹಾಗೂ ಸುನೀಲ್ ಭಂಡಾರಿ ಉಪಸ್ಥಿತರಿದ್ದರು.

   

LEAVE A REPLY

Please enter your comment!
Please enter your name here