Monday, January 26, 2026
Google search engine
Homeಕಾರ್ಕಳಕಾರ್ಕಳ : ಅಮರ ಶಿಲ್ಪಿ ಪ್ರಶಸ್ತಿ ಪುರಸ್ಕೃತ ಶೇಶಪ್ಪ ಆಚಾರ್ಯ ಕಲ್ಲೊಟ್ಟೆ ನಿಧನ

ಕಾರ್ಕಳ : ಅಮರ ಶಿಲ್ಪಿ ಪ್ರಶಸ್ತಿ ಪುರಸ್ಕೃತ ಶೇಶಪ್ಪ ಆಚಾರ್ಯ ಕಲ್ಲೊಟ್ಟೆ ನಿಧನ

ಕಾರ್ಕಳ : ಅಮರ ಶಿಲ್ಪಿ ಪ್ರಶಸ್ತಿ ಪುರಸ್ಕೃತ ಶೇಶಪ್ಪ ಆಚಾರ್ಯ ಕಲ್ಲೊಟ್ಟೆ ನಿಧನ

ಅಮರಶಿಲ್ಪಿ ಪ್ರಶಸ್ತಿ ಪುರಸ್ಕಕೃತ, ಕಲ್ಲೊಟ್ಟೆ ನಿವಾಸಿ ಹೆಸರಾಂತ ಶಿಲ್ಪಿ ಶೇಷಪ್ಪ ಆಚಾರ್ಯ ( 68)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಜೂನ್ 12 ರಂದು ರಾತ್ರಿ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇವರು ಅನೇಕ ದೇವಾಲಯಗಳನ್ನು ಹಾಗೂ ವಿಗ್ರಹಗಳನ್ನು ನಿರ್ಮಿಸಿ ಖ್ಯಾತಿ ಪಡೆದಿದ್ದರು. ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಶ್ರೀ ಕಾಳಿಕಾಂಬೆಯ ಶಿಲಾಮಯ ಗರ್ಭ ಗುಡಿಯ ನಿರ್ಮಾಣ ಮಾಡಿದ್ದರು. ಶಿಲ್ಪ ಕ್ಷೇತ್ರದಲ್ಲಿ ಇವರು ಸಲ್ಲಿಸಿದ ಗಣನೀಯ ಸೇವೆಗೆ ಅಮರಶಿಲ್ಪಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಜೊತೆಗೆ ಅನೇಕ ದೇವಸ್ಥಾನ, ಸಂಘ ಸಂಸ್ಥೆಯವರು ಇವರನ್ನು ಸನ್ಮಾನಿಸಿದ್ದರು.

ಶೇಷಪ್ಪ ಆಚಾರ್ಯರು ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments