ಇನ್ನಾ ಚಂದ್ರಕಾಂತ ರಾವ್ ಅವರಿಗೆ ಕೃಷಿ ಪಂಡಿತ ಪ್ರಶಸ್ತಿ

0

ಇನ್ನಾ ಚಂದ್ರಕಾಂತ ರಾವ್ ಅವರಿಗೆ ಕೃಷಿ ಪಂಡಿತ ಪ್ರಶಸ್ತಿ

ರಾಜ್ಯ ಸರಕಾರದ ಕೃಷಿ ಪಂಡಿತ ಪ್ರಶಸ್ತಿಗೆ ಇನ್ನಾ ಚಂದ್ರಕಾಂತ ರಾವ್ ಆಯ್ಕೆಯಾಗಿದ್ದಾರೆ. ಕಾರ್ಕಳ ತಾಲೂಕಿನ ಇನ್ನಾದಲ್ಲಿ ಅಂತರ ಬೆಳೆ ಬೇಸಾಯ, ಆರ್ಕಾ ಕಿರಣ್ ಪೇರಳೆ ಬೇಸಾಯ ಹಾಗೂ ಮಾದರಿ ತೋಟಗಾರಿಕೆ ಪ್ರಕೃತಿ ಹಣ್ಣಿನ ತೋಟದ ನಿರ್ವಹಣೆಯಂತಹ ಉಪಕ್ರಮಗಳಿಗಾಗಿ ಈ ಪ್ರಶಸ್ತಿ ದೊರೆತಿದೆ.

ಸುಕಂತಾಯ್ – ಎಫ್ ಹೆಸರಿನ ಎಳನೀರು ಹೊಂದಿರುವ ತೆಂಗಿನ ತಳಿಯನ್ನೂ ವಿತರಿಸುತ್ತಿದ್ದಾರೆ. ಇವರು ೨೦೨೩ನೇ ಸಾಲಿನ ಉಡುಪಿ ಜಿಲ್ಲೆಯ ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತ ರಾಗಿದ್ದಾರೆ. ಕೃಷಿ ಕ್ಷೇತ್ರದಲ್ಲಿ ವಿನೂತನ ಹಾಗೂ ಸೃಜನಾತ್ಮಕ ಅನ್ವೇಷಣೆ ಕೈಗೊಂಡ ರೈತರಿಗೆ ಈ ಪ್ರಶಸ್ತಿ ನೀಡುತ್ತಿದ್ದು 50,000 ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಚಂದ್ರಕಾಂತ ರಾವ್ ಸ್ವಿಸ್ ಸಿಂಗಾಪುರ್ ಓವರ್ಸೀಸ್ ಪಿಟಿಇ ಸಂಸ್ಥೆಯ ಅಧ್ಯಕ್ಷರು ಹಾಗೂ ನಿರ್ದೇಶಕರಾಗಿ ಹಾಗೂ ಹಿಂಡಾಲ್ಲೋ ಸಂಸ್ಥೆಯಲ್ಲೂ ಸೇವೆ ಸಲ್ಲಿಸಿಡಾ ಅನುಭವ ಹೊಂದಿದ್ದಾರೆ.

   

LEAVE A REPLY

Please enter your comment!
Please enter your name here