Sunday, January 25, 2026
Google search engine
Homeಕಾರ್ಕಳಸೌತಡ್ಕ ಕ್ಷೇತ್ರದಲ್ಲಿ ಯಕ್ಷತೀರ್ಥ ಸಂಭ್ರಮ-2025ರ ಆಮಂತ್ರಣ ಪತ್ರಿಕೆ ಬಿಡುಗಡೆ

ಸೌತಡ್ಕ ಕ್ಷೇತ್ರದಲ್ಲಿ ಯಕ್ಷತೀರ್ಥ ಸಂಭ್ರಮ-2025ರ ಆಮಂತ್ರಣ ಪತ್ರಿಕೆ ಬಿಡುಗಡೆ

 

ಯಕ್ಷತೀರ್ಥ ಕಲಾಸೇವೆ ನೂರಾಳುಬೆಟ್ಟು ಆಯೋಜನೆಯಲ್ಲಿ ಆಗಷ್ಟು 31ರಂದು ಜರುಗುವ ಯಕ್ಷತೀರ್ಥ ಸಂಭ್ರಮ-2025 ರ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನದಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಶ್ವರರಾದ ಶ್ರೀ ಸುಬ್ರಮಣ್ಯ ಶಬರಾಯ ಕೆ. ಇವರ ಅಮೃತ ಹಸ್ತದಲ್ಲಿ ಬಿಡುಗಡೆಗೊಳಿಸಲಾಯಿತು.

ಪತ್ರಿಕೆ ಅನಾವರಣದ ಸಂದರ್ಭದಲ್ಲಿ ಯಕ್ಷಗಾನದ ಗಣಪತಿ ಸ್ತುತಿಪದ್ಯವನ್ನು ಖ್ಯಾತ ಭಾಗವತ ಸಿದ್ಧಕಟ್ಟೆ ಭರತರಾಜ್ ಶೆಟ್ಟಿ ಹಾಡಿದರು. ಚಂಡೆಯಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ವೆಂಕಟೇಶ ಕಾರ್ಕಳ ಇವರು ಮದ್ದಳೆವಾದನದಲ್ಲಿ ಸಹಕರಿಸಿದರು.

ಕಾರ್ಯಕ್ರಮದಲ್ಲಿ ರತ್ನಾಕರ ಭಟ್ ಹೊಳೆಹೊದ್ದು, ರುದ್ರಯ್ಯ ಆಚಾರ್ಯ ಚಿಕ್ಕಮಂಗಳೂರು, ಯಕ್ಷಮೇನಕಾ ಸದಾಶಿವ ರಾವ್ ಮೂಡುಬಿದಿರೆ, ಗಣೇಶ ಆಚಾರ್ಯ ಗಂಗೆನೀರು, ವಸಂತ್ ನಾರಾವಿ, ಸತೀಶ್ ಶಿರ್ಲಾಲು ಉಪಸ್ಥಿತರಿದ್ದರು. ಜಿ. ಏಸ್. ಪುರಂದರ ಪುರೋಹಿತ ಮುನಿಯಾಲು ನಿರೂಪಿಸಿ, ಸದಾನಂದ ಏಸ್ ಆಚಾರ್ಯ ನೂರಾಳುಬೆಟ್ಟು ವ್ಯವಸ್ಥೆಯನ್ನು ಸಂಪನ್ನಗೊಳಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments