
‘ಹೆತ್ತವರಿಂದ ಮಕ್ಕಳಿಗೆ ಸಮಯವನ್ನು ಮೀಸಲಾಗಿಡದಿದ್ದರೆ ಮುಂದೆ ಮಕ್ಕಳಲ್ಲಿ ಏಕಾಂಗಿತನ ಕಾಡಿ ಮಾನಸಿಕವಾಗಿ ಹಿಂದುಳಿಯಬಹುದು, ಮಕ್ಕಳನ್ನು ಸದಾಕಾಲ ಗಮನಿಸುತ ಇರಬೇಕು. ಎಸ್. ಎಸ್. ಎಲ್. ಸಿ. ಇದು ವಿದ್ಯಾರ್ಥಿಗಳ ನಿರ್ಣಾಯಕ ಹಂತ. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ’ ಎಂದು ಕೆ. ಎಮ್. ಇ. ಎಸ್. ಸಂಸ್ಥೆಯಲ್ಲಿ ನಡೆದ ಶಿಕ್ಷಕ ರಕ್ಷಕ ವಿದ್ಯಾರ್ಥಿ ಸಭೆಯಲ್ಲಿ ಸಂಸ್ಥೆಯ ಪ್ರಾಂಶುಪಾಲ ಕೆ. ಬಾಲಕೃಷ್ಣ ರಾವ್ ಅಭಿಪ್ರಾಯ ಪಟ್ಟರು.
ಪ್ರೌಢ ಶಾಲಾ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಮಾತನಾಡಿ ‘ವಿದ್ಯಾರ್ಥಿಗಳು ಉತ್ತಮವಾಗಿ ಕಲಿತು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು. ಆರೋಗ್ಯವನ್ನು ಕಾಪಾಡಿಕೊಂಡು, ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಬೇಕು ಮತ್ತು ಗುರುಹಿರಿಯರಿಗೆ, ತಂದೆ ತಾಯಂದಿರಿಗೆ ಗೌರವ ಕೊಡಬೇಕು ‘ ಎಂದರು.
ಪ್ರಾಥಮಿಕ ಶಾಲೆಯ ಮುಖ್ಯಸ್ಥೆ ಲೋಳಿಟ ಡಿ ‘ಸಿಲ್ವ ಮಾತನಾಡಿ “ಉತ್ತಮವಾದ, ಎಲ್ಲಾ ಅನುಕೂಲತೆ ಇರುವ ನಮ್ಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿಯೇ ಕಾಲೇಜು ವಿದ್ಯಾಭ್ಯಾಸವನ್ನು ಮುಂದುವರಿಸಿಕೊಂಡು ಹೋಗಬೇಕು ” ಎಂದರು.
ಪ್ರೌಢ ಶಾಲೆಯ ಶಿಕ್ಷಕಿ ಎಸ್. ಶ್ರುತಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.













